Wed. Oct 15th, 2025

Ujire : ಆಪತ್ತಿನಲ್ಲಿರುವ ಕುಟುಂಬಕ್ಕೆ ಆಸರೆಯಾಗಲು ಮನವಿ: ಪ್ರಮೋದ್ ಗೌಡ ಅವರ ಚಿಕಿತ್ಸೆಗೆ ಸಹಾಯ ಹಸ್ತ ಚಾಚಿ

ಉಜಿರೆ (ಅ.15) : ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಗ್ರಾಮದ ನಿವಾಸಿ ಪ್ರಮೋದ್ ಗೌಡ (Pramod Gowda) ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡು ಸಾವಿನೊಂದಿಗೆ ಹೋರಾಡುತ್ತಿದ್ದಾರೆ. ಸುಮಾರು 18 ಅಡಿ ಎತ್ತರದಿಂದ ಬಿದ್ದ ಪರಿಣಾಮವಾಗಿ ಪ್ರಮೋದ್ ಅವರ ತಲೆ ಭಾಗ ಹಾಗೂ ಬೆನ್ನು ಹುರಿ (ಸ್ಪೈನಲ್ ಕಾರ್ಡ್) ಸಂಪೂರ್ಣವಾಗಿ ಮುರಿತಕ್ಕೊಳಗಾಗಿದೆ. ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಪ್ರಮೋದ್ ಅವರಿಗೆ ಚಿಕಿತ್ಸೆ ಮುಂದುವರೆದಿದೆ.

ಬಡ ಕುಟುಂಬಕ್ಕೆ ಆರ್ಥಿಕ ಸಂಕಷ್ಟ:

ದಿನಗೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಪ್ರಮೋದ್ ಗೌಡ ಅವರೇ ಈ ಬಡ ಕುಟುಂಬದ ಆಧಾರಸ್ತಂಭವಾಗಿದ್ದರು. ಈಗಾಗಲೇ ಚಿಕಿತ್ಸೆಗಾಗಿ ಸುಮಾರು 2 ರಿಂದ 3 ಲಕ್ಷ ರೂಪಾಯಿ ವೆಚ್ಚವಾಗಿದೆ. ಕುಟುಂಬವು ತಮ್ಮೆಲ್ಲಾ ಸಂಪಾದನೆ ಹಾಗೂ ಸಾಲದ ಮೂಲಕ ಈ ಹಣವನ್ನು ಭರಿಸಿದೆ. ಆದರೆ, ವೈದ್ಯರ ಪ್ರಕಾರ ಮುಂದಿನ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಮತ್ತು ಸುದೀರ್ಘ ಪುನರ್ವಸತಿಗಾಗಿ ಇನ್ನೂ 10 ರಿಂದ 15 ಲಕ್ಷ ರೂಪಾಯಿಗಳ ತುರ್ತು ಅವಶ್ಯಕತೆಯಿದೆ.

ಸಂಪಾದನೆಯ ಮೂಲವೇ ಇಲ್ಲದೆ ಬಡತನದಲ್ಲಿರುವ ಈ ಕುಟುಂಬಕ್ಕೆ ಇಷ್ಟು ದೊಡ್ಡ ಮೊತ್ತದ ಹಣವನ್ನು ಹೊಂದಿಸುವುದು ಅಸಾಧ್ಯವಾಗಿದೆ. ಪ್ರಮೋದ್ ಅವರ ಪ್ರಾಣವನ್ನು ಉಳಿಸಲು, ಅವರಿಗೆ ಸೂಕ್ತ ವೈದ್ಯಕೀಯ ನೆರವು ನೀಡಲು ದಯವಿಟ್ಟು ಸಹೃದಯ ದಾನಿಗಳು ಮುಂದೆ ಬರಬೇಕೆಂದು ಮನವಿ.

UPI ಪಾವತಿಗಾಗಿ (Google Pay / Phone Pe):

  • ಸ್ಕ್ಯಾನ್ ಮಾಡಲು: ಚಿತ್ರದಲ್ಲಿರುವ QR ಕೋಡ್ ಬಳಸಿ.
  • UPI ಹೆಸರು (Name on UPI): ಯೋಗಿನಿ ಕೆ (YOGINI K)

ಇದನ್ನು ಓದಿ : ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಯತ್ನ; ನಾಲ್ವರ ಬಂಧನ, ಪೋಕ್ಸೋ ಅಡಿಯಲ್ಲಿ ದೂರು

Leave a Reply

Your email address will not be published. Required fields are marked *