ಬೆಂಗಳೂರು, (ಅ.17): ಹೇಳಿ ಮಾಡಿಸಿದಂತಹ ಜೋಡಿ. ಮುತ್ತಿನಂಥ ಮಡದಿ. ಹೇಳಿ ಕೇಳಿ ಡಾಕ್ಟರ್ ಬೇರೆ. ಮಾವ ಅಗರ್ಭ ಶ್ರೀಮಂತ. ನೂರಾರು ಕೋಟಿ ಒಡೆಯ. ಆದ್ರೆ ಕಾಯಿಲೆ ಬಿದ್ದವಳ ಜೊತೆಗೆ ಬದುಕಲು ಇಷ್ಟ ಇಲ್ಲ.

ಇದನ್ನೂ ಓದಿ: ⭕Karnataka : ರಾತ್ರಿ 8-10ಕ್ಕೆ ಮಾತ್ರ ಪಟಾಕಿ: ಹಸಿರು ಪಟಾಕಿಗಳಿಗೆ ಮಾತ್ರ ಅನುಮತಿ
ಬೇರೊಬ್ಬಳ ಜೊತೆ ಸಂಬಂಧ ಇತ್ತು. ಹೀಗಾಗಿ ಸಿನಿಮಾ ಸ್ಟೈಲ್ನಲ್ಲೇ ಡಾಕ್ಟರ್ ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದ. ಪತ್ನಿ ಕೃತಿಕಾ ಕಾಲಿಗೆ ಐವಿ ಸಿರಿಂಜ್ ಹಾಕಿ ಉಸಿರನ್ನೇ ನಿಲ್ಲಿಸಿದ್ದ. ಕಿಲಾಡಿ ಮಹೇಂದ್ರ ಅನಸ್ತೇಷಿಯಾ ಬಗ್ಗೆ ಸಂಪೂರ್ಣವಾಗಿ ಅರಿತಿದ್ದ. ಹೀಗಾಗಿ ಪಕ್ಕಾ ಪ್ಲ್ಯಾನ್ ಮಾಡಿಯೇ ಕೃತಿಕಾಳನ್ನ ಸಾಯಿಸಿದ್ದಾನೆ.

ಸಾಯೋಕು ಮುನ್ನ ಗಂಡನಿಗೆ ಕೊನೆಯ ಮೆಸೇಜ್
ಡಾಕ್ಟರ್ ಕೃತಿಕಾ ನೂರಾರು ಕನಸು ಹೊತ್ತು ವೈದ್ಯ ಮಹೇಂದ್ರನ ಕೈ ಹಿಡಿದಿದ್ಲು. ತನ್ನ ಗಂಡನೇ ನನಗೆ ಯಮಲೋಕದ ದಾರಿ ತೋರಿಸ್ತಾನೆ ಅನ್ನೋ ಸಣ್ಣ ಅನುಮಾನವೂ ಆಕೆಗೆ ಇರ್ಲಿಲ್ಲ ಅನ್ಸುತ್ತೆ. ಕಿಲ್ಲರ್ ಪತಿ ಕೃತಿಕಾ ಕಾಲಿಗೆ ಓವರ್ ಡೋಸ್ ಐವಿ ಹಾಕಿ ಡ್ಯೂಟಿಗೆ ಹೋಗಿದ್ದ. ಕೃತಿಕಾ ಅದೆಷ್ಟು ನೋವು ತಿಂದಿದ್ಲೋ ಏನೋ. ಸಾವಿಗೂ ಕೆಲವೇ ನಿಮಿಷಗಳ ಮುನ್ನ ಪತಿಗೆ ಮೆಸೇಜ್ ಮಾಡಿದ್ಲು. ಏಪ್ರಿಲ್ 23 ರಂದು ವಾಟ್ಸಾಪ್ ಮೆಸೇಜ್ ಮಾಡಿದ್ದ ವೈದ್ಯೆ ಕಾಲು ತುಂಬಾ ನೋವಾಗ್ತಿದೆ, ತಡೆಯಲಾಗ್ತಿಲ್ಲ. ನಾನು ಐವಿ ಇಂಜೆಕ್ಷನ್ ತೆಗೆದುಬಿಡ್ತಿನಿ ಪ್ಲೀಸ್ ಅಂತಾ ಮೆಸೇಜ್ ಮಾಡಿದ್ಲು. ಆದ್ರೆ ನರರೂಪ ರಾಕ್ಷಸ ಪತಿ ಇವತ್ತು ಒಂದು ದಿನ ತಡ್ಕೋ.. ಏನು ಆಗಲ್ಲ ಅಂತಾ ರಿಪ್ಲೇ ಮಾಡಿದ್ದ. ಗಂಡನ ಮಾತು ಮೀರದ ಕೃತಿಕಾ ಕೊನೆಗೆ ಕಾಲಿಗೆ ಹಾಕಿದ್ದ ಐವಿ ಇಂಜೆಕ್ಷನ್ ತೆಗೆಯದೇ ಬಾರದ ಲೋಕ ಸೇರಿದ್ದಾಳೆ.
ಹೀಗೆ ತನಿಖೆ ಚುರುಕುಗೊಂಡಂತೆಲ್ಲ, ಒಂದೊಂದೇ ರೋಚಕ ಸಂಗತಿಗಳು ಬಯಲಾಗುತ್ತಿವೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿ ಜಸ್ಟೀಸ್ ಫಾರ್ ಕೃತಿಕಾ ಅಭಿಯಾನ ನಡೆಯುತ್ತಿದೆ.


