ಧರ್ಮಸ್ಥಳ : ಭಾರತದ ಇತಿಹಾಸವನ್ನು ನೋಡಿದಾಗ ನಮಗೆ ಮುಖ್ಯವಾಗಿ ನೋಡಲು ಸಿಗುವಂತಹದ್ದು ಸತ್ಯ, ನ್ಯಾಯ, ಧರ್ಮ, ತ್ಯಾಗ. ಆದರೆ ಈಗಿನ ಸದ್ಯದ ಸ್ಥಿತಿಯನ್ನು ನೋಡಿದಾಗ ಈ ಸಮಾಜದ ವ್ಯವಸ್ಥೆ ಯಾವ ರೀತಿ ಇದೆ ಎಂಬುವುದು ನಮಗೆಲ್ಲರಿಗೂ ತಿಳಿದಿದೆ. ಹಿಂದೆ ರಾಜ್ಯಡಳಿತ ವ್ಯವಸ್ಥೆ ಇತ್ತು ಹಾಗೂ ಶಿಕ್ಷಣಕ್ಕಾಗಿ ಗುರುಕುಲ ಪದ್ಧತಿ ಇತ್ತು. ಈ ವ್ಯವಸ್ಥೆಯಿಂದ ಸಮಾಜದ ಜೀವನ ವ್ಯವಸ್ಥೆಯು ಧರ್ಮಾಚರಣೆಯಿಂದ ಸಾಗುತಿತ್ತು, ಹಾಗೂ ಮನುಷ್ಯನ ಧ್ಯೇಯವು ಈಶ್ವರ ಪ್ರಾಪ್ತಿಯ ಚಿಂತನೆಯಿಂದ ಕೂಡಿತ್ತು.

ಇದನ್ನೂ ಓದಿ: 🔴ಬೆಳ್ತಂಗಡಿ: ಹುಣ್ಸೆಕಟ್ಟೆ ಕ್ರಾಸ್, ಗೇರುಕಟ್ಟೆ, ಪರಪ್ಪು, ಕೊಯ್ಯೂರು ಸರ್ಕಾರಿ ಬಸ್ ಸಂಚಾರ ಪ್ರಾರಂಭ
ಈಗ ಕೇವಲ ಅರ್ಥ ಮತ್ತು ಕಾಮದಲ್ಲಿ ತಮ್ಮ ಜೀವನವನ್ನು ತೊಡಗಿಸಿಕೊಂಡು ಕೇವಲ ಸುಖ-ದುಃಖದಲ್ಲಿ ಸಾಗಿಸುವಂತಾಗಿದೆ. ಅತ್ಯಮೂಲ್ಯವಾದ ಮನುಷ್ಯ ಜನ್ಮದ ಉದ್ದೇಶವು ತಿಳಿಯದೆ ಒತ್ತಡದಿಂದ ಜೀವನವನ್ನು ಸಾಗಿಸುವಂತಾಗಿದೆ. ಮುಂದಕ್ಕೆ ಸಮಾಜವು ಉತ್ತಮವಾಗಿ ನಡೆಯಲು ಹಿಂದೂಗಳು ಧರ್ಮಕ್ಕೋಸ್ಕರ ಒಟ್ಟಾಗುವುದು ಅಗತ್ಯವಿದೆ. ನಾವು ಧರ್ಮದ ಪರವಾಗಿ ಇದ್ದವರನ್ನು ಧರ್ಮಚರಣೆ ಮಾಡಿಕೊಂಡು ಸಾತ್ವಿಕ ರೀತಿಯಲ್ಲಿ ಹೋರಾಟ ಮಾಡಿ ಸಾತ್ವಿಕ ಸಮಾಜ ನಿರ್ಮಾಣ ಮಾಡಲಿಕ್ಕಿದೆ.
ಕಾಲಾಯ ತಸ್ಮೈ ನಮಃ ಎಂಬಂತೆ ಸದ್ಯದ ಸ್ಥಿತಿಯಲ್ಲಿ ತುಂಬಾ ಆಪತ್ಕಾಲ ಬರಲಿಕ್ಕಿದೆ.60% ಮಾನವ ಕುಲವು ನಾಶವಾಗಲಿದೆ. ಅನೇಕ ಸಾಧು ಸಂತರು, ಧಾರ್ಶನಿಕರು ಈ ಬಗ್ಗೆ ನುಡಿದಿದ್ದಾರೆ. ಮುಂದಕ್ಕೆ ಸಾತ್ವಿಕ ರಾಷ್ಟ್ರ ಬರಲಿದೆ. ಆದುದರಿಂದ ನಾವೆಲ್ಲರೂ ಧರ್ಮದ ಆಚರಣೆ ಮಾಡಿಕೊಂಡು, ಸಮಾಜದ ಸಾತ್ವಿಕತೆಗೆ ನಾವೆಲ್ಲರೂ ಸಮಷ್ಟಿ ಸೇವೆಯಲ್ಲಿ ಕೈಜೋಡಿಸುವ ಅದರೊಟ್ಟಿಗೆ ನಮ್ಮ ಮಾನವ ಜನ್ಮದ ಉದ್ಧಾರವನ್ನು ಮಾಡಿಕೊಳ್ಳುವ, ಹಾಗೂ ಜೀವನದಲ್ಲಿ ನಿರಂತರ ಆನಂದವನ್ನು ಪಡೆಯುವ ಎಂದು ಉಪಸ್ಥಿತ ಜಿಜ್ಞಾಸುಗಳಿಗೆ ಪೂಜಾನೀಯ ಶ್ರೀ ರಮಾನಂದ ಗೌಡ ರವರು ಮಾರ್ಗದರ್ಶನವನ್ನು ಮಾಡಿದರು.


ಸಿ.ಎ ಬ್ಯಾಂಕ್ ಸಾಧನ ಸಭಾ ಭವನ ಕಲ್ಲೇರಿ, ಧರ್ಮಸ್ಥಳದಲ್ಲಿ ಸ್ಥಳೀಯ ಧರ್ಮಪ್ರೇಮಿಗಳ ಸಹಭಾಗದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವಿಶೇಷ ಧಾರ್ಮಿಕ ಕಾರ್ಯಕ್ರಮವು ನಿರ್ವಿಘ್ನವಾಗಿ ನೆರವೇರಿತು.

ಪೂಜಾನೀಯ ಸಂತರು ಮುಂದುವರಿಸುತ್ತ – ಸುಖಸ್ಯ ಮೂಲ ಧರ್ಮ ಹಾಗೂ ‘ನಮೇ
ಭಕ್ತ ಪ್ರಣಶ್ಯತಿ ‘ಎಂಬಂತೆ ಭಗವಂತನು ತನ್ನ ಭಕ್ತರನ್ನು ಮಾತ್ರ ರಕ್ಷಿಸುತ್ತಾನೆ. ಆದ್ದರಿಂದ ನಾವೆಲ್ಲರೂ ಭಕ್ತರಾಗಲು ಧರ್ಮ ಶಿಕ್ಷಣವನ್ನು ಪಡೆಯುವುದು ಮತ್ತು ನಾಮಜಪದ ಮೂಲಕ ಆಧ್ಯಾತ್ಮಿಕ ಸಾಧನೆ ಮಾಡುವುದು ಅವಶ್ಯಕ. ನಾಮಜಪವು ಕಲಿಯುಗದಲ್ಲಿ ಮಾಡುವ ಒಂದು ಸುಲಭ ಸಾಧನೆ. ಸನಾತನ ಸಂಸ್ಥೆಯು ಉಚಿತವಾಗಿ ಸತ್ಸಂಗಗಳನ್ನು ಆಯೋಜಿಸುತ್ತಿದ್ದು ಇದರಿಂದ ತಾವುಗಳು ಪ್ರಯೋಜನ ಪಡೆಯಬೇಕು. ನಮ್ಮ ಹಾಗೂ ನಮ್ಮ ರಾಷ್ಟ್ರದ ಉನ್ನತಿಯು ಕೇವಲ ಗುರುಗಳ ಕೃಪೆ,ಗುರುಗಳ ಮಾರ್ಗದರ್ಶನ ಹಾಗೂ ಧರ್ಮಾಚರಣೆಯಿಂದ ಮಾತ್ರ ಸಾಧ್ಯ ಎಂದು ಮಾರ್ಗದರ್ಶನ ಮಾಡಿದರು.
ಈ ಕಾರ್ಯಕ್ರಮದಲ್ಲಿ 100 ಕ್ಕೂ ಅಧಿಕ ಹಿಂದುತ್ವನಿಷ್ಠರು ಉಪಸ್ಥಿತರಿದ್ದು ಸಂತರ ಮಾರ್ಗದರ್ಶನದ ಲಾಭವನ್ನು ಪಡೆದುಕೊಂಡರು.
