ಮಂಗಳೂರು (ಅ.18) : ಬೆಂಗಳೂರು APD ಸಂಸ್ಥೆಯ ಸಹಕಾರದೊಂದಿಗೆ ಪ್ರಸ್ತುತ ವರ್ಷದಲ್ಲಿ 100 ಗಾಲಿಕುರ್ಚಿಯನ್ನು ನೀಡುವ ಯೋಜನೆಯನ್ನು ಹೊಂದಿದ್ದು. ಸೆಪ್ಟೆಂಬರ್ ತಿಂಗಳಿನಲ್ಲಿ ಸೇವಾಧಾಮವು 8ನೇ ವರ್ಷಕ್ಕೆ ಪಾದಾರ್ಪಣೆಯಾದ ಸಂದರ್ಭದಲ್ಲಿ 30 ಗಾಲಿಕುರ್ಚಿಯನ್ನು ನೀಡುವುದಾಗಿ ನಿರ್ಧರಿಸಿದ್ದು

ಇದನ್ನೂ ಓದಿ: 🔴ಉಜಿರೆ: ಉಜಿರೆ ಎಸ್.ಡಿ.ಎಂ ಪಿ ಯು ಕಾಲೇಜಿನಲ್ಲಿ ಪ್ರಥಮ ಚಿಕಿತ್ಸೆ ಕಾರ್ಯಾಗಾರ
ಅದರಲ್ಲಿ 3 ಗಾಲಿಕುರ್ಚಿಯನ್ನು ಸೇವಾಭಾರತಿಯ ಅಂಗಸಂಸ್ಥೆಯಾದ ಸೇವಾಧಾಮದಿಂದ ಗುರುತಿಸಲ್ಪಟ್ಟ ಬೆನ್ನುಹುರಿ ಅಪಘಾತಕ್ಕೊಳಗಾದ ಮಂಗಳೂರಿನ ಶ್ರೀ ವಿಶ್ವನಾಥ ರೈ, ವಾಮಂಜೂರಿನ ಶ್ರೀ ಜನಾರ್ಧನ ಮತ್ತು ಜಾರ್ದೋಲಿಯ ಪ್ರಕಾಶ್ ರವರಿಗೆ ಗಾಲಿಕುರ್ಚಿ ವಿತರಣಾ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮಂಗಳೂರಿನ ಶ್ರೀಶ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷರಾದ ಶ್ರೀ ಉದಯ ಶಾಸ್ತ್ರಿ ಹಾಗೂ ಸೇವಾಭಾರತಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಶ್ರೀ ಚನ್ನಯ್ಯಸ್ವಾಮಿಯವರು ಗಾಲಿಕುರ್ಚಿಗಳನ್ನು ಹಸ್ತಾಂತರಿಸಿ, ಫಲಾನುಭವಿಗಳಿಗೆ ವಿಶ್ವಾಸ ಬದುಕಿಗಾಗಿ ಧೈರ್ಯ ತುಂಬಿದರು.

ಸೇವಾಭಾರತಿಯ ಹಿರಿಯ ಪ್ರಬಂಧಕರಾದ ಶ್ರೀ ಚರಣ್ ಕುಮಾರ್ ಎಂ ಕಾರ್ಯಕ್ರಮವನ್ನು ನಿರೂಪಿಸಿ, ಸೇವಾಭಾರತಿ ಟ್ರಸ್ಟಿ ಶ್ರೀ ಪೃಥ್ವಿಶ್ ಧನ್ಯವಾದವಿತ್ತರು.


