Sat. Oct 18th, 2025

Pernaje: ಕು. ಸಂಜನಾ ಎಸ್ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಆರನೇ ಸ್ಥಾನ ಪಡೆದ ಪ್ರತಿಭೆಗೆ ಗುರು ಅನುಗ್ರಹ

ಪೆರ್ನಾಜೆ: ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೋಳ್ಯ ಕೆರೆ ನೂಜಿಯ ಸದಾಶಿವ ಭಟ್ ಮತ್ತು ಸರೋಜಿನಿ ದಂಪತಿಗಳ ಪುತ್ರಿ ಡಾ .ವಿದ್ಯಾ ಸರಸ್ವತಿ ಪಿ ಎಸ್ ಮತ್ತು ಗಣೇಶ್ ರಾಮಚಂದ್ರ ದಂಪತಿಯ ಪುತ್ರಿ ಸಂಜನಾ ಎಸ್ ಗಣೇಶ್ ರವರು ಬೆಂಗಳೂರು ನಿವಾಸಿಯಾಗಿದ್ದು.

ಇದನ್ನೂ ಓದಿ: 🔴ಬೆಳ್ತಂಗಡಿ: ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜ್ಞಾನ ವಿಭಾಗವನ್ನು ಪ್ರಾರಂಭಿಸಲು ಅನುಮತಿ!


ಪಿಯುಸಿ ವಿಜ್ಞಾನ ವಿಭಾಗದಲ್ಲಿ 600 ಅಂಕಗಳಲ್ಲಿ 595 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಆರನೇ ಸ್ಥಾನ ಪಡೆದ ಇವರನ್ನು ವಿಜಯನಗರ ವಲಯದ ವತಿಯಿಂದ ಅ .12 ರಂದು ಗಿರಿನಗರದ ರಾಮಾಶ್ರಮದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶ್ರೀ ಸಂಸ್ಥಾನದವರಿಂದ ಶಾಲು ಪ್ರಸಂಶ ಪತ್ರ ಫಲ,

ವಿಶೇಷ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು. ತಮ್ಮ ಸಾಧನೆ ಮೂಲಕ ತಮಗೆಲ್ಲ ಹೆಮ್ಮೆ ಮೂಡಿಸಿದ ಕು.ಸಂಜನಾ ಎಸ್ ಅರಳು ಪ್ರತಿಭೆ ಎಂಬ ಹೆಮ್ಮೆ ಪ್ರಸ್ತುತ ಬೆಂಗಳೂರಿನ ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (kins)ನಲ್ಲಿ ಮುಂದಿನ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *