ಬೆಳ್ತಂಗಡಿ:(ಅ.19) ಚಿಕ್ಕಮಗಳೂರಿನ ತರೀಕೆರೆಯಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆಯ 17 ರ ವಯೋಮಾನದ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಿದ

ಬೆಳ್ತಂಗಡಿ ತಾಲೂಕಿನ ಮುಂಡಾಜೆ ಪ್ರೌಢಶಾಲೆಯ ಕುಮಾರಿ ಯಕ್ಷಿತಾ ಜೆ ಇವಳು ಚಿನ್ನದ ಪದಕ ಪಡೆದು ನವೆಂಬರ್ 7 ರಿಂದ 12 ತನಕ ಉತ್ತರಪ್ರದೇಶದ ಬರೇಲಿಯಲ್ಲಿ ನಡೆಯುವ 70 ನೇ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆ ಆಗಿರುತ್ತಾಳೆ.
ಇವಳು ಬಂದಾರಿನ ಜನಾರ್ಧನ-ಶೀಲಾವತಿ ದಂಪತಿಗಳ ಸುಪುತ್ರಿ ಆಗಿದ್ದು, ಬಂದಾರಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿರುತ್ತಾಳೆ.
ಇವಳಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಗುಣಪಾಲ್ ಎಂ. ಎಸ್ ಹಾಗೂ ಸಂದೀಪ್ ಶೆಟ್ಟಿ ತರಬೇತು ನೀಡಿರುತ್ತಾರೆ. ಇವಳ ಕ್ರೀಡಾ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.



