Sun. Oct 26th, 2025

Beltangadi: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ದೀಪಾವಳಿ ಸಂಭ್ರಮ

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ದೀಪಾವಳಿ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪೂರ್ವ ಪ್ರಾರ್ಥಮಿಕ ವಿದ್ಯಾರ್ಥಿಗಳಿಗೆ ಮಗು ಹಾಗೂ ತಂದೆ ಯೊಂದಿಗೆ ಗ್ರೀಟಿಂಗ್ ಕಾರ್ಡ್ ತಯಾರಿಯ ಸ್ಪರ್ಧೆಯನ್ನು ನೆರವೇರಿಸಲಾಯಿತು.


ಪ್ರಾರ್ಥಮಿಕ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ತರಗತಿ ಕೊಠಡಿಯ ಶೃಂಗಾರ ಸ್ಪರ್ಧೆಯನ್ನು ಆಯೋಜಿಸಲಾಯಿತು. 9ನೇ ಎ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರೆ 9ನೇ ಬಿ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಹಂಚಿಕೊಂಡರು.


ಮುಖ್ಯ ಅತಿಥಿಯಾಗಿ ಪ್ರಕಾಶ್ ಕಾಮತ್ ಪ್ರಾಂಶುಪಾಲರು ಎಸ್ ಡಿ ಎಂ ಮಹಿಳಾ ಪೊಲಿಟೆಕ್ನಿಕ್ ಕಾಲೇಜ್ ಉಜಿರೆ, ಇವರು ಭಾಗವಹಿಸಿ ಶುಭಾಶಯ ವ್ಯಕ್ತಪಡಿಸಿದರು. ಅಲ್ಲದೆ ದೀಪಾವಳಿಯ ಆಚರಣೆಯಲ್ಲಿ ನಮ್ಮ ಸಂಸ್ಥೆಗಳು ಮಕ್ಕಳಿಗೆ ಹೊಸ ಮೆರಗನ್ನು ನೀಡುತ್ತಿದೆ ಎಂಬುದರೊಂದಿಗೆ, ದೀಪ, ಹಣತೆ ಬೆಳಗಿಸಿ, ಲಕ್ಷ್ಮಿ ಪೂಜೆ ಯೊಂದಿಗೆ, ದೀಪಾವಳಿಗೆ ನೀರು ತುಂಬಿಸುವ ವಿಶೇಷತೆಯೊಂದಿಗೆ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.


ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್ ರವರ ಮಾರ್ಗದರ್ಶನದಲ್ಲಿ ಶಿಕ್ಷಕರುಗಳಾದ ಮೇನಿತಾ ಶೆಟ್ಟಿ, ಚೇತನ, ಕಾರುಣ್ಯ, ಮುರಳಿ, ಪ್ರಮೀಳಾ ರವರ ಸಂಘಟನೆಯೊಂದಿಗೆ ಅಧ್ಯಾಪಕ ವೃಂದ ದವರ ಸಹಕಾರದೊಂದಿಗೆ, ನಿರೂಪಣೆಯಲ್ಲಿ ಕುಮಾರಿ ನಿಧಿಶಾ, ಸ್ವಾಗತ ಕುಮಾರಿ ದಿಶಾ ಡಿಎ, ಧನ್ಯವಾದವನ್ನು ಆಧ್ಯಾ ಜೈನ್ ನೆರವೇರಿಸಿಕೊಟ್ಟು ಸಿಹಿ ತಿನ್ನುವ ಮೂಲಕ ಕಾರ್ಯಕ್ರಮವು ಯಶಸ್ವಿಗೊಂಡಿತು.

Leave a Reply

Your email address will not be published. Required fields are marked *