ಉಜಿರೆ: ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ, ಉಜಿರೆ ಇದರ ಶಾಲಾ ಆವರಣದಲ್ಲಿ ದತ್ತಿ ಸಪ್ತಾಹವನ್ನು ದಿನಾಂಕ 13/10/25 ರಿಂದ 18/10/25 ರವರೆಗೆ ಬಹಳ ಉತ್ಸಾಹ ಮತ್ತು ದಯೆಯ ಮನೋಭಾವದಿಂದ ಆಚರಿಸಲಾಯಿತು.

ಇದನ್ನೂ ಓದಿ: 🔴ಧರ್ಮಸ್ಥಳ: ಮಾನ್ಯ ವಿಧಾನ ಪರಿಷತ್ ಶಾಸಕ ಟಿ.ಎ ಶರವಣ ಧರ್ಮಸ್ಥಳಕ್ಕೆ ಭೇಟಿ
ಈ ಕಾರ್ಯಕ್ರಮವು ನಮ್ಮ ಶಾಲಾ ಪ್ರಾಂಶುಪಾಲರಾದ ವಂ!ಫಾ! ವಿಜಯ್ ಲೋಬೊ ಅವರ ಕನಸಾಗಿದ್ದು , ಈ ಕಾರ್ಯಕ್ರಮದ ಪ್ರಮುಖ ಉದ್ದೇಶವೆಂದರೆ ವಿದ್ಯಾರ್ಥಿಗಳು ಕರುಣೆಯನ್ನು ತೋರಿಸಲು ಮತ್ತು ಸಹಾಯಹಸ್ತ ಚಾಚಲು ಪ್ರೋತ್ಸಾಹಿಸುತ್ತದೆ.“ವಿದ್ಯಾರ್ಥಿ ಜೀವನದಲ್ಲಿ ಮಕ್ಕಳಲ್ಲಿ ಪರೋಪಕಾರ ಮಾಡುವ, ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಮನೋಭಾವ ಮೂಡಿದರೆ ಮುಂದಕ್ಕೆ ಅವರ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಲು ಖಂಡಿತ ಸಾಧ್ಯವೆಂದು” ಶಾಲಾ ಸಂಚಾಲಕರಾದ ವಂ! ಫಾ! ಅಬೆಲ್ ಲೋಬೊ ಅವರು ಹೇಳಿದರು.
ವಾರವಿಡೀ, ಪ್ರತಿದಿನ ಬೆಳಿಗ್ಗೆ ವಿದ್ಯಾರ್ಥಿಗಳು ಅಕ್ಕಿ, ಬೇಳೆಕಾಳುಗಳು, ದವಸ, ಧಾನ್ಯಗಳು, ದಿನಸಿ ಸಾಮಗ್ರಿಗಳು ಹಾಗೂ ನಿತ್ಯೋಪಯೋಗಿ ವಸ್ತುಗಳನ್ನು ಕೊಡುಗೆಯಾಗಿ ನೀಡಿದರು.

ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ವಸ್ತುಗಳನ್ನು ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ ಉಜಿರೆ, ಸಿಯೋನ್ ಆಶ್ರಮ ಗಂಡಿಬಾಗಿಲು, ದಯಾ ಸ್ಪೆಷಲ್ ಸ್ಕೂಲ್ ಬೆಳ್ತಂಗಡಿ, ನವಚೇತನ ಸ್ಪೆಷಲ್ ಸ್ಕೂಲ್ ವೇಣೂರು, ಅನುಗ್ರಹ ವೃದ್ಧಾಶ್ರಮ ಬೆಳ್ತಂಗಡಿ ಈ ಸಂಸ್ಥೆಗಳಿಗೆ ವಿತರಿಸಲಾಯಿತು.

ದಾನ ಎಂದರೆ ಕೇವಲ ಹಣವನ್ನು ನೀಡುವುದಲ್ಲ, ಬದಲಿಗೆ ಅಗತ್ಯವಿರುವವರೊಂದಿಗೆ ಪ್ರೀತಿ, ಕಾಳಜಿ ಮತ್ತು ಸಮಯವನ್ನು ಹಂಚಿಕೊಳ್ಳುವುದೆಂದು ಅರ್ಥ ಮಾಡಿಕೊಳ್ಳಲು ಈ ವಾರ ಎಲ್ಲರಿಗೂ ಸಹಾಯ ಮಾಡಿತು. ಇದು ನಿಜವಾಗಿಯೂ ಅನುಭವವಾಗಿದ್ದು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗಿದೆ.



