Tue. Oct 28th, 2025

Bigg Boss: “ಪ್ರೀತಿ ಎಲ್ಲಿ, ಹೇಗೆ ಹುಟ್ಟುತ್ತದೆ ಹೇಳೋಕಾಗಲ್ಲ” ಎಂದ ರಾಶಿಕಾ – ಬಿಗ್‌ ಬಾಸ್‌ ಮನೆಯಲ್ಲಿ ಶುರುವಾಯಿತು ಲವ್‌ ಸ್ಟೋರಿ

Bigg Boss: ಬಿಗ್ ಬಾಸ್ ಮನೆಯಲ್ಲಿ ನಿಜವಾದ ಪ್ರೀತಿ ಹುಟ್ಟೋದು ತುಂಬಾನೇ ಅಪರೂಪ. ಎಲ್ಲೋ ಅಲ್ಲೊಂದು, ಇಲ್ಲೊಂದು ನಿಜವಾದ ಪ್ರೀತಿ ಹುಟ್ಟಿದ ಉದಾಹರಣೆ ಇದೆ. ಆದರೆ, ಇಲ್ಲಿ ಬಹುತೇಕರು ಪ್ರೀತಿಯ ನಾಟಕ ಆಡುತ್ತಾರೆ. ರಾಶಿಕಾ ಶೆಟ್ಟಿ ಹಾಗೂ ಸೂರಜ್ ಸಿಂಗ್ ಅವರನ್ನು ನೋಡಿದಾಗ ಇದೇ ರೀತಿ ಅನಿಸುತ್ತದೆ.

ಇದನ್ನೂ ಓದಿ: ⭕ಬೆಂಗಳೂರು: ಶಿಕ್ಷಕರಿಗೆ 4 ತಿಂಗಳ ಸಂಬಳ ಬಾಕಿ

ಇಬ್ಬರೂ ಪ್ರೀತಿಯ ಅಲೆಯಲ್ಲಿ ತೇಲುತ್ತಿದ್ದಾರೆ. ಆದರೆ, ಇದರಲ್ಲಿ ನಾಟಕೀಯತೆ ಹೆಚ್ಚಿದೆ.
ಬಿಗ್ ಬಾಸ್ ಮನೆಗೆ ಹೋದ ದಿನದಿಂದಲೂ ರಾಶಿಕಾ ಆ್ಯಕ್ಟಿವ್ ಆಗಿದ್ದು ಕಡಿಮೆ. ಅವರು ಒಂದು ಲವ್​ಸ್ಟೋರಿ ಕ್ರಿಯೇಟ್ ಮಾಡಲು ಆಸಕ್ತಿ ತೋರಿಸುತ್ತಿದ್ದರು. ಯಾವಾಗ ಸೂರಜ್ ಅವರು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟರೋ ಆಗಲೇ ರಾಶಿಕಾ ಆ್ಯಕ್ಟೀವ್ ಆದರು. ಅದರಲ್ಲೂ ಸೂರಜ್ ಅವರು ಬರು ಬರುತ್ತಿದ್ದಂತೆ, ‘ರಾಶಿಕಾ ಕ್ಯೂಟ್ ಆಗಿ ಕಾಣಿಸ್ತಾರೆ’ ಎಂದು ರೋಸ್ ಕೊಟ್ಟರು. ಆಗ ರಾಶಿಕಾ ಮೊಗದಲ್ಲಿ ನಗು ಮೂಡಿತು.


ಇದಾದ ಬೆನ್ನಲ್ಲೇ ಇವರ ಪ್ರೇಮ ಗೀತೆ ಆರಂಭ ಆಗಿದೆ. ಅಷ್ಟು ಬೇಗನೆ ಇವರ ಮಧ್ಯೆ ಪ್ರೀತಿ ಹುಟ್ಟಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಅನೇಕರದ್ದು. ಬಿಗ್ ಬಾಸ್ ಮನೆಯಲ್ಲೂ ಇದೇ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿದ ರಾಶಿಕಾ, ‘ಪ್ರೀತಿ ಎಲ್ಲಿ, ಹೇಗೆ ಹುಟ್ಟುತ್ತದೆ ಎಂದು ಹೇಳೋಕೆ ಆಗಲ್ಲ’ ಎಂದಿದ್ದಾರೆ. ಇದನ್ನು ಕೇಳಿ ವೀಕ್ಷಕರಿಗೆ ಜಿಗುಪ್ಸೆ ಬಂದಿದೆ.


ಲವ್​ಸ್ಟೋರಿಗಳು ನಿಜವಾಗಿದ್ದಾಗ ಅದನ್ನು ನೋಡೋಕೂ ಖುಷಿ ಎನಿಸುತ್ತದೆ. ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಮಧ್ಯೆ ಇದ್ದ ಬಾಂಧವ್ಯ ಎಲ್ಲಿಯೂ ನಾಟಕೀಯ ಎನಿಸರಲಿಲ್ಲ. ಈ ಕಾರಣದಿಂದಲೇ ಈ ಜೋಡಿ ಇಷ್ಟ ಆಗುತ್ತಿತ್ತು. ಆದರೆ, ಸೂರಜ್ ಹಾಗೂ ರಾಶಿಕಾ ಲವ್​ಸ್ಟೋರಿ ನೋಡಿದ ಅನೇಕರು ನಗಲು ಆಗದೆ, ಅಳಲೂ ಆಗದೆ ಒದ್ದಾಡುತ್ತಿದ್ದಾರೆ. ಈ ವಿಚಾರದಲ್ಲಿ ಈಗಾಲೇ ಸುದೀಪ್ ಎಚ್ಚರಿಕೆ ನೀಡಿದ್ದಾರೆ. ಆದರೂ ರಾಶಿಕಾ ಮಾತ್ರ ಬದಲಾಗಿಲ್ಲ.

Leave a Reply

Your email address will not be published. Required fields are marked *