Tue. Oct 28th, 2025

Ujire: ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಧಾರವಾಡ ಎಸ್.ಡಿ.ಎಂ ಮೆಡಿಕಲ್ ಯೂನಿರ್ವಸಿಟಿ ಉಪಕುಲಪತಿ ಭೇಟಿ

ಉಜಿರೆ: ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಧಾರವಾಡ ಎಸ್.ಡಿ.ಎಂ ಮೆಡಿಕಲ್ ಯೂನಿರ್ವಸಿಟಿಯ ಉಪಕುಲಪತಿ ಹಾಗೂ ಧಾರವಾಡ ಎಸ್.ಡಿ.ಎಂ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಆಗಿರುವ ಜೀವಂಧರ್ ಕುಮಾರ್ ಇವರು ಭೇಟಿ ನೀಡಿದರು.

ಭೇಟಿಯ ಬಳಿಕ ಎಲ್ಲಾ ವಿಭಾಗದ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು, ಲೀಡರ್ ಇದ್ದ ಹಾಗೆ ಫಾಲೋರ್ಸ್ ಇರುತ್ತಾರೆ. ಪೂಜ್ಯರಂತಹ ಮಹಾನ್ ವ್ಯಕ್ತಿಯ ಲೀಡರ್‌ಶಿಪ್ ನಮಗಿರುವಾಗ ನಾವೇ ಅತ್ಯಂತ ಧನ್ಯರು ಎಂದರು. ಇಲ್ಲಿನ ವೈದ್ಯರಲ್ಲಿ ಸಿಬ್ಬಂದಿಗಳಲ್ಲಿ ವಿಶೇಷವಾಗಿ ನಾನು ನಗುಮೊಗವನ್ನು ಕಾಣುತ್ತಿದ್ದೇನೆ. ಪೂಜ್ಯರ ಮಾರ್ಗದರ್ಶನದಲ್ಲಿ, ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್ ಅವರ ನಾಯಕತ್ವದಲ್ಲಿ ಆಸ್ಪತ್ರೆಯು ಬೆಳೆಯುತ್ತಿದೆ.

ಪೂಜ್ಯರ ಮಹತ್ವಾಕಾಂಕ್ಷೆಗಳನ್ನು ಈಡೇರಿಸುತ್ತಿರುವ ನಿಮ್ಮೆಲ್ಲರಿಂದ ಈ ಆಸ್ಪತ್ರೆ ಮತ್ತಷ್ಟು ಬೆಳಯಲಿದೆ ಎಂದರು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಸ್ವಾಗತಿಸಿದರು. ಪೇಥಲಾಜಿಸ್ಟ್ ಡಾ| ಮೇಘಾ ಹಾಗೂ ಎಲ್ಲಾ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *