Wed. Oct 29th, 2025

ಮಾಣಿ: ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58 ನೇ ವರ್ಧಂತ್ಯುತ್ಸವದ ಅಂಗವಾಗಿ ಭಜನೋತ್ಸವ ಕಾರ್ಯಕ್ರಮ

ಮಾಣಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58 ನೇ ವರ್ಧಂತ್ಯುತ್ಸವದ ಅಂಗವಾಗಿ ಮಾಣಿ ವಲಯದ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಜನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದನ್ನೂ ಓದಿ: 🔴ಬೆಳ್ತಂಗಡಿ: ಲಯನ್ಸ್ ಕ್ಲಬ್ ಇದರ ವತಿಯಿಂದ ದೀಪಾವಳಿ ಆಚರಣೆ

ಕಾರ್ಯಕ್ರಮವನ್ನು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪ್ರಕಾಶ್ ಭಟ್ ರವರು ದೀಪ ಬೆಳಗುವುದರೊಂದಿಗೆ ಚಾಲನೆ ನೀಡಿದರು.ವಲಯದ 7 ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.
ಭಜನೆಯಿಂದ ಯಾವತ್ತೂ ವಿಭಜನೆ ಆಗುವುದಿಲ್ಲ ಎಂದರು. ಭಜನಾ ಪರಿಷತ್ ರಾಜ್ಯಾಧ್ಯಕ್ಷ ರಾದ ಚಂದ್ರಶೇಖರ್ ರವರು ಧರ್ಮಸ್ಥಳದಿಂದ ಭಜನೆಗೆ ನೀಡಿದ ಪ್ರಾಶಸ್ತ್ಯ ಭಜನಾಕಮ್ಮಟ ದ ಮೂಲಕ ನಡೆಸುವ ಬಗ್ಗೆ ತಿಳಿಸಿದರು.


ಕಾರ್ಯಕ್ರಮದಲ್ಲಿ. ಜನಜಾಗೃತಿ ವಲಯಾಧ್ಯಕ್ಷರಾದ ರಾಜಾರಾಮ ಶೆಟ್ಟಿ, ಸದಸ್ಯರಾದ ಬಾಲಕೃಷ್ಣ ಆಳ್ವ, ತನಿಯಪ್ಪಗೌಡ, ವೇಣು ಗೋಪಾಲ್, ಸುರೇಶ್ ಮುಕ್ಕುಡ ವಿಟ್ಲ ಯೋಜನಾಧಿಕಾರಿ ಸುರೇಶ್ ಗೌಡ,ವಿಟ್ಲ ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ದೇವಿ ಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ಜಯರಾಮ ರೈ , ಜೊತೆ ಕಾರ್ಯದರ್ಶಿ ಸುಂದರ ಕೇದಗೆ ಮಾಣಿ ವಲಯದ ಒಕ್ಕೂಟದ ವಲಯಾಧ್ಯಕ್ಷ ರಾದ ಸುಧಾಕರ ಸಪಲ್ಯ, ಮೇಲ್ವಿಚಾರಕಿ ಆಶಾ ಪಾರ್ವತಿ, ಇಡ್ಕಿದು ಒಕ್ಕೂಟದ ಅಧ್ಯಕ್ಷ ದೇಜಪ್ಪ, ಶೌರ್ಯ ಸದಸ್ಯರು, ಒಕ್ಕೂಟದ ಅಧ್ಯಕ್ಷ ರುಗಳು, ಸಂಘದ ಸದಸ್ಯರು,ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ಭಾಗವಹಿಸಿದ ಎಲ್ಲಾ ಭಜನಾ ತಂಡದವರಿಗೆ. ಪ್ರಶಸ್ತಿ ಪತ್ರ ವಿತರಿಸಲಾಯಿತು..ಮೇಲ್ವಿಚಾರಕಿ ಆಶಾ ಪಾರ್ವತಿ ಸ್ವಾಗತಿಸಿ, ಸೇವಾ ಪ್ರತಿನಿಧಿ ಸುಗಂಧಿನಿ ಧನ್ಯವಾದವಿತ್ತರು.ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *