ಸುಳ್ಯ: ಸುಳ್ಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಜಟ್ಟಿಪಳ್ಳದ ಕಾನತ್ತಿಲ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ದುಗಲಡ್ಕದ ಕೇಶವ ಪೂಜಾರಿ ಎಂಬವರ ಮಗ ವೀಕ್ಷಿತ್ (19) ಆತ್ಮಹತ್ಯೆಗೆ ಶರಣಾದವರು.

ಇದನ್ನೂ ಓದಿ: ⭕ಮರಕ್ಕೆ ಕಟ್ಟಿ, ವಿವಸ್ತ್ರಗೊಳಿಸಿ ಶಿಕ್ಷಕಿ ಮೇಲೆ ಅತ್ಯಾಚಾರಕ್ಕೆ ಯತ್ನ
ಕಾಲೇಜಿನಲ್ಲಿ ಪರೀಕ್ಷೆ ಬರೆದು ರೂಂಗೆ ಬಂದ ವೀಕ್ಷಿತ್ ರೂಂನಲ್ಲಿ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರತಿದಿನ ವೀಕ್ಷಿತ್ ತನ್ನ ತಾಯಿ ಅವರನ್ನು ಅವರು ಕೆಲಸ ಮಾಡುವ ಜಾಗದಿಂದ ಮನೆಗೆ ಕರೆದುಕೊಂಡು ಬರುತ್ತಿದ್ದರು.

ಆದರೆ ಬಂದಿರಲಿಲ್ಲ. ಕರೆ ಮಾಡಿದ್ರೆ ಕಾಲ್ ಕೂಡ ರಿಸೀವ್ ಮಾಡಿರಲಿಲ್ಲ.. ಪಕ್ಕದ ಮನೆಯವರಿಗೆ ಹೋಗಿ ನೋಡಲು ಹೇಳಿದಾಗ ವೀಕ್ಷಿತ್ ಆತ್ಮಹತ್ಯೆ ಮಾಡಿಕೊಂಡಿರೋದು ಗೊತ್ತಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




