Fri. Oct 31st, 2025

Chikmagalur: ಹಸೆಮಣೆ ಏರಬೇಕಿದ್ದ ವಧು ಹೃದಯಾಘಾತದಿಂದ ಮೃತ್ಯು

ಚಿಕ್ಕಮಗಳೂರು:(ಅ.30) ಮದುವೆ ತಯಾರಿಯಲ್ಲಿದ್ದ ಯುವತಿಯೊಬ್ಬಳು ಮೃತಪಟ್ಟ ಘಟನೆ ಅ.30ರ ಗುರುವಾರ ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಶೃತಿ (24) ಮೃತ ದುರ್ದೈವಿ.

ಇದನ್ನೂ ಓದಿ: 🔴ಉಜಿರೆ: ಉಜಿರೆ ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

ಶೃತಿಗೆ ತರೀಕೆರೆಯ ದಿಲೀಪ್ ಎಂಬ ಹುಡುಗನೊಂದಿಗೆ ಮದುವೆ ನಿಶ್ಚಯವಾಗಿದ್ದು, ನಾಳೆ (31) ಮದುವೆ ನಿಗದಿಯಾಗಿತ್ತು. ಆದರೆ ಯುವತಿಗೆ ಲೋ ಬಿಪಿ ಹಾಗೂ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *