ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಬಂಟ್ವಾಳ ತಾಲ್ಲೂಕು ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ ತಾಲ್ಲೂಕು ಬಿ ಸಿ ರೋಡ್ ವಲಯ ಇದರ ವತಿಯಿಂದ ಕಾರ್ಮೆಲ್ ಪದವಿ ಪೂರ್ವ ಕಾಲೇಜು.ಮೊಡಂಕಾಪು ಇಲ್ಲಿಯ ವಿದ್ಯಾರ್ಥಿಗಳಿಗೆ ದುಶ್ಚಟಗಳ ಬಗ್ಗೆ ಅರಿವು ಮೂಡಿಸುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಜರಗಿತು.

ಇದನ್ನೂ ಓದಿ: 🔴ಮುಂಡಾಜೆ: ಮುಂಡಾಜೆ ಪ. ಪೂ. ಕಾಲೇಜಿನಲ್ಲಿ ಪೋಷಕರ ಸಭೆ
ಬಂಟ್ವಾಳ ತಾಲ್ಲೂಕು ಜನಜಾಗೃತಿ ವೇದಿಕೆ ಸದಸ್ಯ ಶೇಖರ್ ಸಾಮಾನಿ ಕುರಿಯಾಳ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಸಂಪನ್ಮೂಲ ವ್ಯಕ್ತಿ ಯಾಗಿ ದಕ್ಷಿಣ ಕನ್ನಡ ಜಿಲ್ಲಾ ನಿವೃತ ಆರೋಗ್ಯ ಮೇಲ್ವಿಚಾರಕರಾದ ಜಯರಾಮ ಪೂಜಾರಿ ವಿದ್ಯಾರ್ಥಿಗಳಿಗೆ ದುಶ್ಚಟಗಳ ಬಗ್ಗೆ ಮಾಹಿತಿ ನೀಡಿ, ಆದ್ದರಿಂದ ಆಗುವ ಸಮಸ್ಯೆಗಳ ಬಗ್ಗೆ ತಿಳಿಸಿ ಭವಿಷ್ಯ ದ ಜೀವನದಲ್ಲಿ ದುಶ್ಚಟಕ್ಕೆ ಬಲಿಯಾಗದೆ ಆರೋಗ್ಯ ವನ್ನು ಕಾಪಾಡಿಕೊಂಡು ಉನ್ನತ ವಿದ್ಯಾಭ್ಯಾಸ ವನ್ನು ಪಡೆದು ಉತ್ತಮ ಪ್ರಜೆಯಾಗಿ ಊರಿಗೆ ಕೀರ್ತಿ ತರುವಂತ ವಿದ್ಯಾರ್ಥಿಗಳಾಗಿ ಎಂದರು.


.ಕಾಲೇಜು ಪ್ರಾಂಶುಪಾಲರಾದ ಸಿಸ್ಟರ್ ಮರಿಯಾ ಪೆಲ್ಸಿಟಾ ರವರು ಇದು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಒಂದು ಉತ್ತಮ ಕಾರ್ಯಕ್ರಮ, ಇದರಲ್ಲಿ ಸಿಕ್ಕ ಮಾಹಿತಿ ಯನ್ನು ಎಲ್ಲರೂ ಸದುಪಯೋಗ ಪಡೆಸಿಕೊಳ್ಳಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ
“ನಶ್ಯಾವೆಂಬ ನರಕ” ಕಿರುಚಿತ್ರವನ್ನು ವಿಡಿಯೋ ವನ್ನು ವಿದ್ಯಾರ್ಥಿಗಳಿಗೆ ತೋರಿಸಲಾಯಿತು
ವೇದಿಕೆಯಲ್ಲಿ ಗ್ರಾಮಾಭಿವೃದ್ದಿ ಯೋಜನೆಯ ಬಿ ಮೂಡ ಒಕ್ಕೂಟದ ಉಪಾಧ್ಯಕ್ಷರಾದ ಪವಿತ್ರ ಬಿ ಎಸ್ ಉಪಸ್ಥಿತರಿದ್ದರು.
ಬಿ ಮೂಡ ಒಕ್ಕೂಟದ ಸೇವಾಪ್ರತಿನಿಧಿ ಆಶಾಲತಾ ಸ್ವಾಗತಿಸಿ,ಕಾಲೇಜು ವಿದ್ಯಾರ್ಥಿನಿ ಕು ವಿದ್ಯಾ ವಂದಿಸಿದರು .
ಬಿ ಸಿ ರೋಡ್ ವಲಯದ ಮೇಲ್ವಿಚಾರಕರಾಕ ಗಿರೀಶ್ ಕಾರ್ಯಕ್ರಮ ನಿರೂಪಿಸಿದರು.


