Fri. Oct 31st, 2025

Belthangady: ಮೊಗ್ರು ಗ್ರಾಮದ ಮುಗೇರಡ್ಕ ನೇತ್ರಾವತಿ ನದಿಯಲ್ಲಿ ಮೊಸಳೆ ಪತ್ತೆ

ಬೆಳ್ತಂಗಡಿ :(ಅ.31) ಮೊಗ್ರು ಗ್ರಾಮದ ಮುಗೇರಡ್ಕ ನೇತ್ರಾವದಿಗೆ ಸೇತುವೆ ಕಾಮಗಾರಿ ಭರದಿಂದ ಸಾಗುತ್ತಿದ್ದು ಇದರ ಪಕ್ಕದ ಮರಳಿನ ದಿಬ್ಬದಲ್ಲಿ ವಿಶ್ರಾಂತಿ ಪಡೆದ ರೀತಿಯಲ್ಲಿ ಅಕ್ಟೋಬರ್ 30 ರಂದು ಸಂಜೆ ಮೊಸಳೆ ಕಂಡು ಬಂದಿರುವ ಬಗ್ಗೆ ವರದಿಯಾಗಿದೆ.

ಸೇತುವೆ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರು ಮೊಸಳೆಯನ್ನು ನೋಡಿ ನಾಗರಿಕರಿಗೆ ಮಾಹಿತಿ ನೀಡಿದ್ದು. ಈ ಪರಿಸರದಲ್ಲಿ

ನದಿಗಿಳಿಯುವವರು ಎಚ್ಚರ ವಹಿಸಬೇಕಾಗಿದೆ. ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿರುತ್ತಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *