Tue. Dec 16th, 2025

Mangaluru: ಆಕ್ಷೇಪಾರ್ಹ ಕಾಮೆಂಟ್‌ – ಹಿಂದೂ ಮುಖಂಡ ಶರಣ್ ಪಂಪ್‌ವೆಲ್ ವಿರುದ್ಧ ಪ್ರಕರಣ ದಾಖಲು

ಮಂಗಳೂರು : ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಹಾಕಿದ್ದ ಆಕ್ಷೇಪಾರ್ಹ ಕಾಮೆಂಟ್‌ ಶೇರ್ ಮಾಡಿದ ಆರೋಪದಲ್ಲಿ ವಿಎಚ್‌ಪಿ ಮುಖಂಡ ಶರಣ್ ಶರಣ್ ಪಂಪ್‌ವೆಲ್‌ರನ್ನು ವಿಚಾರಣೆಗೆ ಕದ್ರಿ ಪೊಲೀಸ್ ಠಾಣೆಗೆ ಕರೆಸಲಾಗಿದೆ.

ಇದನ್ನೂ ಓದಿ: 🔴ಉಜಿರೆ : ಅನುಗ್ರಹ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಹಾಗೂ ಕೌಶಲ್ಯ ಅಭಿವೃದ್ದಿ ಕಾರ್ಯಕ್ರಮ

ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಕಮೆಂಟ್ ಟ್ಯಾಗ್ ಮಾಡಿದ ಆರೋಪದಲ್ಲಿ ವಿಹಿಂಪ ಮುಖಂಡ ಶರಣ್ ಪಂಪ್ ವೆಲ್ ರನ್ನು ಕದ್ರಿ ಠಾಣೆಗೆ ಕರೆದು ವಿಚಾರಣೆ ಮಾಡಲಾಗುತ್ತಿದೆ. ನೋಟಿಸ್‌ ಕೊಡದೆ, ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಕದ್ರಿ ಪೊಲೀಸ್‌ ಠಾಣೆ ಮುಂದೆ ಹಿಂದೂ ಸಂಘಟನೆ ಕಾರ್ಯಕರ್ತರು ಹೈಡ್ರಾಮಾ ನಡೆಸಿದರು.

ವಿಕಾಸ್ ಎಂಬಾತ ಹಾಕಿದ್ದ ಕಮೆಂಟ್ ಅನ್ನು ಶರಣ್ ಪಂಪ್ ವೆಲ್ ಶೇರ್ ಮಾಡಿದ್ದರು. ಶರಣ್ ಪಂಪ್ ವೆಲ್ ಶೇರ್ ಮಾಡಿದ್ದ ವಿಡಿಯೋ ಈಗಾಗಲೇ ಡಿಲೀಟ್ ಆಗಿದೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನ‌ರ್ ಸುಧೀರ್ ಕುಮಾ‌ರ್ ರೆಡ್ಡಿ ತಿಳಿಸಿದ್ದಾರೆ.

ಏನಿದು ಘಟನೆ?
ಶರಣ್‌ ಪಂಪವೆಲ್‌ ಆರ್‌ಎಸ್‌ಎಸ್‌ ಮುಖಂಡರೊಬ್ಬರ ಭಾಷಣದ ತುಣುಕನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಹೀಗಿತ್ತು.. ಕಳೆದ ಎರಡು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 45,700 ಮಕ್ಕಳು ಹುಟ್ಟಿದ್ದಾರೆ. ಅದರಲ್ಲಿ 23,200 ಮಕ್ಕಳು ಹಿಂದೂಗಳು, 22,200 ಮಕ್ಕಳು ಅಲ್ಪಸಂಖ್ಯಾತರು. ನಮ್ಮ ಜಿಲ್ಲೆಯಲ್ಲಿ ಶೇ.78 ಜನಸಂಖ್ಯೆ ಹಿಂದೂಗಳದ್ದು. ಹುಟ್ಟಿದ ಮಕ್ಕಳು 23,000. ಆದರೆ ಕೇವಲ ಶೇ.28 ಇರುವ ಅಲ್ಪಸಂಖ್ಯಾತರಿಗೆ 22,000 ಮಕ್ಕಳು. ಹೀಗಾದರೆ ಇನ್ನು 15 ವರ್ಷಗಳಲ್ಲಿ ನಮ್ಮ ಊರು ಎಲ್ಲಿಗೆ ಹೋಗುತ್ತದೆ? ದೇಶ ಉಳಿಯುತ್ತಾ? ಸಮಾಜ ಉಳಿಯುತ್ತಾ? ನಾವು ಒಂದು ನಿಶ್ಚಯ ಮಾಡಬೇಕು. ಮುಸ್ಲಿಂರ ಜನಸಂಖ್ಯೆ ಜಿಹಾದ್ ಮೆಟ್ಟಿ ನಿಲ್ಲೋಣ ಎಂಬ ಎಂಬ ಪ್ರಚೋದನಕಾರಿ ವಾಕ್ಯದೊಂದಿಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಕಾಸ್‌ ಪುತ್ತೂರು ಶೇರ್ ಮಾಡಿದ್ದ ವಿಡಿಯೋವನ್ನು ಶರಣ್‌ ಪಂಪವೆಲ್‌ ರೀಶೇರ್‌ ಮಾಡಿದ್ದರು.

ಸ್ವಯಂಪ್ರೇರಿತ ಕೇಸ್‌ ದಾಖಲು
ಈ ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಅಲ್ಪಸಂಖ್ಯಾತರು ಆಕ್ರೋಶ ವ್ಯಕ್ತಪಡಿಸಿದ್ದರು. ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಕದಡುವು ಉದ್ದೇಶ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸೂಕ್ಷ್ಮ ಧಾರ್ಮಿಕ ಸಾಮರಸ್ಯಕ್ಕೆ ಹಾನಿ ಉಂಟುಮಾಡಬಹುದು ಎಂದು ಪರಿಗಣಿಸಿದ ಪೊಲೀಸರು, ಸ್ವಯಂಪ್ರೇರಿತವಾಗಿ (ಸುಮೊಟೊ) ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153(A) (ಧರ್ಮ, ಜಾತಿ, ಜನ್ಮಸ್ಥಳ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *