Sat. Nov 1st, 2025

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಕನ್ನಡ ರಾಜ್ಯೋತ್ಸವ

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಕನ್ನಡ ರಾಜ್ಯೋತ್ಸವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಡಾ. ಭೋಜಮ್ಮ ಕೆಎನ್ ಕನ್ನಡ ವಿಭಾಗದ ಮುಖ್ಯಸ್ಥರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು ಉಜಿರೆ ಇವರು ಆಗಮಿಸಿದ್ದರು.

ಇದನ್ನೂ ಓದಿ: 🔴ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ


ದೀಪ ಬೆಳಗಿಸಿ ಮಾತನಾಡಿದ ಅತಿಥಿಗಳು ಕನ್ನಡ ಭಾಷೆಯ ಮಹತ್ವ ಹಾಗೂ ಕನ್ನಡ ಉಳಿವಿಗಾಗಿ ಮುಂದಿನ ಯುವ ಪೀಳಿಗೆ ಸಂಸ್ಕೃತಿ ,ಸಂಸ್ಕಾರಗಳಿಗೆ ,ಪ್ರಾಧ್ಯಾನತೆ ಕೊಡಬೇಕು ಎಂಬುದನ್ನು ತಿಳಿಸಿದರು.


ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಹೇಮಲತಾ ಎಂ ಆರ್ ಉಪಸ್ಥಿತರಿದ್ದರು.
ಮಕ್ಕಳಿಗೆ ಕನ್ನಡ ರಾಜ್ಯೋತ್ಸವಕ್ಕೆ ಸಂಬಂಧಿಸಿದಂತೆ, ಸಾಂಸ್ಕೃತಿಕ ಕಾರ್ಯಕ್ರಮ ಗಾದೆ ಮಾತುಗಳು ಸುಂದರ ಕೈಬರಹ, ಒಗಟುಗಳು, ಪದ್ಯ ರಚನೆ, ನೃತ್ಯ, ರಸಪ್ರಶ್ನೆ, ಗುಂಪು ಗೀತ ಗಾಯನ, ಭಾಷಣ ಸ್ಪರ್ಧೆ ಇತ್ಯಾದಿ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.


ಕಾರ್ಯಕ್ರಮದ ಸ್ವಾಗತವನ್ನು ಅಂಜಲಿ ಆರನೇ ತರಗತಿ, ಧನ್ಯವಾದವನ್ನು ದಿಶಾ ಪಿ ಶೆಟ್ಟಿ 8 ನೇ ತರಗತಿ, ಅತಿಥಿ ಪರಿಚಯವನ್ನು ಲಾಸ್ಯ ಎಂಟನೇ ತರಗತಿ, ಅನಘ ಮರಾಠೆ 10 ನೇ ತರಗತಿ ನಿರೂಪಿಸಿ ಕಾರ್ಯಕ್ರ ವನ್ನು ಯಶಸ್ವಿಗೊಳಿಸಿದರು.
‌ ‌‌ ‌ ಶಿಕ್ಷಕರುಗಳಾದ ಸೌಮ್ಯ ಪಿ, ನೀತಾ ಕೆ.ಎಸ್, ಶ್ರೇಯಾಂಸ ಜೈನ್, ಸಹನಾ, ಅಮಿತಾ ಪ್ರವೀಣ್ ಎನ್ ರವರ ನೇತೃತ್ವದಲ್ಲಿ ಎಲ್ಲಾ ಶಿಕ್ಷಕ / ಕಿಯರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಗೊಂಡಿತು.

Leave a Reply

Your email address will not be published. Required fields are marked *