ಚಾರ್ಮಾಡಿ:(ನ.1) ಪಿ.ಪದ್ಮನಾಭ ಗೌಡ ಪುತ್ತಿಲ ಚಾರ್ಮಾಡಿ ಇವರು ಮೂಲತಃ ಕಡಬ ತಾಲೂಕಿನವರು. ಈಗ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಪುತ್ತಿಲ ಎಂಬಲ್ಲಿ ವಾಸವಾಗಿದ್ದರು.

ಇವರು ದಿನಾಂಕ 31ನೇ ಅಕ್ಟೋಬರ್ 2025 ರಂದು ತನ್ನ ಸ್ವಗೃಹದಲ್ಲಿ ದೈವಾಧೀನರಾಗಿದ್ದಾರೆ. ಇವರು ತನ್ನ ಸ್ವ – ಇಚ್ಚೆಯಿಂದ ಜೀವಿತಾವಧಿಯಲ್ಲಿಯೇ ತನ್ನ ಮರಣದ ನಂತರ ತನ್ನ ದೇಹವನ್ನು ಜಸ್ಟಿಸ್ ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜಿಗೆ ದಾನ ಮಾಡುವುದಾಗಿ ಕರಾರು ಬರೆದಿದ್ದರು.
ಆ ಪ್ರಯುಕ್ತ ಎಂದು ಸಂಜೆ ಎರಡೂವರೆ ಗಂಟೆಗೆ ದೈವಾಧೀನರಾದ ನಂತರ ಸುಮಾರು ಆರು ಗಂಟೆಯ ಸಮಯದಲ್ಲಿ ಅವರ ದೇಹವನ್ನು ಜಸ್ಟಿಸ್ ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜಿಗೆ ಕಳುಹಿಸಲಾಯಿತು. ಶ್ರೀಯುತರ ಸಮಾಜಮುಖಿ ಕಾರ್ಯಕ್ರಮವನ್ನು ಎಲ್ಲರೂ ಮೆಚ್ಚಿ ಕೊಂಡಾಡಿದರು.



