ಉಜಿರೆ: (ನ.01) “ಸಾಂಪ್ರದಾಯಿಕ ಆಚರಣೆಗಳ ಅರಿವು ವಿದ್ಯಾರ್ಥಿಗಳಿಗೆ ಬಹುಮುಖ್ಯ. ದೀಪಾವಳಿ ಕುಟುಂಬದ ಎಲ್ಲಾ ಸದಸ್ಯರನ್ನು ಒಗ್ಗೂಡಿಸುವ ಹಬ್ಬ”ಎಂದು ಧರ್ಮಸ್ಥಳ ಮಂಜುನಾಥೇಶ್ವರ ಕನ್ಸ್ಟ್ರಕ್ಷನ್ ನ ಯೋಜನಾ ಇಂಜಿನಿಯರ್ ಶ್ರೀ ಯಶೋಧರ ಇವರು ಹೇಳಿದರು.

ಇವರು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಉಜಿರೆ ಇಲ್ಲಿ ಆಚರಿಸಿದ ದೀಪಾವಳಿ ಆಚರಣೆಯ ಮುಖ್ಯ ಅತಿಥಿಯಾಗಿ ಆಗಮಿಸಿ, ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮೌಲ್ಯಾಧಾರಿತ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ದೀಪಾವಳಿ ಹಬ್ಬದ ಆಚರಣೆಗಳಾದ ನರಕ ಚತುರ್ದಶಿ, ಗೋ ಪೂಜೆ, ಬಲಿಯೇಂದ್ರ ಪೂಜೆ, ಲಕ್ಷ್ಮೀ ಪೂಜೆ ಹಾಗೂ ತುಳಸಿ ಪೂಜೆ ಮಾಡಿ ಗುಂಪುಗಾಯನ ಹಾಗೂ ನೃತ್ಯ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಇನ್ನೊರ್ವ ಅತಿಥಿಗಳಾಗಿ ಧರ್ಮಸ್ಥಳ ಮಂಜುನಾಥೇಶ್ವರ ಕನ್ಸ್ಟ್ರಕ್ಷನ್ ಯೋಜನಾ ಮೇಲ್ವಿಚಾರಕರಾದ ಶ್ರೀ ಅಕ್ಷಯ್ ಉಪಸ್ಥಿತರಿದ್ದರು.
ಶಾಲಾ ಪ್ರಾಂಶುಪಾಲರಾದ ಮನ್ಮೋಹನ್ ನಾಯ್ಕ್ ಕೆ.ಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.


ವಿದ್ಯಾರ್ಥಿ ಚಿಂತನ್ ನಿರೂಪಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಪೃಥ್ವಿ ಸ್ವಾಗತಿಸಿ, ಶಿಕ್ಷಕಿ ಸುಜನಾ ವಾಲ್ತಾಜೆ ವಂದಿಸಿದರು.


