ಬೆಂಗಳೂರು: ಕ್ಷುಲ್ಲಕ ವಿಷಯ ಗಂಭೀರ ಸ್ವರೂಪ ಪಡೆದು, ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ಗೋವಿಂದರಾಜನಗರದ ಎಂಸಿ ಲೇಔಟ್ ಬಳಿಯ ಡಿಜಿಟಲ್ ವಾಲ್ಟ್ ಮತ್ತು ಫೋಟೋ-ಎಡಿಟಿಂಗ್ ಕಚೇರಿಯಲ್ಲಿ ನಡುರಾತ್ರಿ ನಡೆದಿದೆ.

ಇದನ್ನೂ ಓದಿ: 🟣ಉಜಿರೆ: ಅಭ್ಯಾಸ್ ಪಿ .ಯು ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಲೈಟ್ ಆಫ್ ಮಾಡುವಂತಹ ಅತ್ಯಂತ ಕ್ಷುಲ್ಲಕ ವಿಚಾರಕ್ಕೆ ಸಹೋದ್ಯೋಗಿಗಳ ನಡುವೆ ನಡೆದ ಜಗಳ, ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. 24 ವರ್ಷದ ಆಂಧ್ರಪ್ರದೇಶ ಮೂಲದ ಸೋಮಾಲ ವಂಶಿ (24) ಎಂಬಾತ, 41 ವರ್ಷದ ಚಿತ್ರದುರ್ಗ ಮೂಲದ ಭೀಮೇಶ್ ಬಾಬು ಎಂಬ ಮ್ಯಾನೇಜರ್‌ನನ್ನು ಡಂಬೆಲ್‌ನಿಂದ ಬರ್ಬರವಾಗಿ ಹೊಡೆದು ಕೊಂದಿದ್ದಾನೆ. ಘಟನೆಯ ನಂತರ ಆರೋಪಿಯು ಗೋವಿಂದರಾಜನಗರ
ಸೋಮಾಲ ವಂಶಿ (24), ಈತ ನಾಯಂಡಹಳ್ಳಿಯಲ್ಲಿ ವಾಸವಾಗಿದ್ದು, ಟೆಕ್ನಿಕಲ್ ಎಕ್ಸಿಕ್ಯೂಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದ.
ಮ್ಯಾನೇಜರ್ ಭೀಮೇಶ್ ಬಾಬು ಅವರಿಗೆ ಪ್ರಖರ ಬೆಳಕಿನ ಸಮಸ್ಯೆಯಿತ್ತು. ಈ ಕಾರಣದಿಂದ ಅವರು ಕಚೇರಿಯಲ್ಲಿ ಅನಗತ್ಯವಾಗಿ ಲೈಟ್‌ಗಳನ್ನು ಆನ್ ಮಾಡುವುದನ್ನು ವಿರೋಧಿಸುತ್ತಿದ್ದರು ಮತ್ತು ಸಹೋದ್ಯೋಗಿಗಳಿಗೆ ಲೈಟ್ ಆಫ್ ಮಾಡುವಂತೆ ಆಗಾಗ ಹೇಳುತ್ತಿದ್ದರು.
ತಡರಾತ್ರಿ ಸುಮಾರು 1 ಗಂಟೆಯ ಸಮಯದಲ್ಲಿ, ವಂಶಿ ವಿಡಿಯೋ ಎಡಿಟಿಂಗ್ ಮಾಡುತ್ತಿದ್ದಾಗ, ಬಾಬು ಬಂದು ಲೈಟ್ ಆಫ್ ಮಾಡುವಂತೆ ಹೇಳಿದ್ದಾರೆ. ಇದರಿಂದ ಕೆರಳಿದ ವಂಶಿಗೂ ಬಾಬು ಅವರಿಗೂ ತೀವ್ರ ಮಾತಿನ ಚಕಮಕಿ ನಡೆದಿದೆ.

ಕೋಪದ ಭರದಲ್ಲಿ ವಂಶಿ, ಬಾಬು ಅವರ ಮೇಲೆ ಖಾರದ ಪುಡಿ ಎರಚಿ, ನಂತರ ಅಲ್ಲೇ ಇದ್ದ ಕಬ್ಬಿಣದ ಡಂಬೆಲ್‌ನಿಂದ ಅವರ ತಲೆ, ಮುಖ ಮತ್ತು ಎದೆಗೆ ಮನಬಂದಂತೆ ಹಲ್ಲೆ ಮಾಡಿದ್ದಾನೆ.ತೀವ್ರ ಹಲ್ಲೆಯಿಂದಾಗಿ ಬಾಬು ಕುಸಿದು ಬಿದ್ದಿದ್ದು, ಆತಂಕಗೊಂಡ ವಂಶಿ, ಕಚೇರಿಯಿಂದ ಹೊರಗೆ ಓಡಿಹೋಗಿ ನಾಯಂಡಹಳ್ಳಿಯಲ್ಲಿದ್ದ ತನ್ನ ಮತ್ತೊಬ್ಬ ಸಹೋದ್ಯೋಗಿ ಗೌರಿ ಪ್ರಸಾದ್‌ನನ್ನು ಭೇಟಿಯಾದ. ಪ್ರಸಾದ್ ತನ್ನ ಸ್ನೇಹಿತನೊಬ್ಬನ ಸಹಾಯ ಕೋರಿ, ಮೂವರೂ ಕಚೇರಿಗೆ ಹಿಂತಿರುಗಿದರು.ಅಲ್ಲಿ ಭೀಮೇಶ್ ಬಾಬು ಬಿದ್ದಿರುವುದನ್ನು ಕಂಡು, ಪ್ರಸಾದ್ ಮತ್ತು ಆತನ ಸ್ನೇಹಿತ ಆಂಬುಲೆನ್ಸ್‌ಗೆ ಕರೆ ಮಾಡಿದರು. ಸ್ಥಳಕ್ಕೆ ಬಂದ ಆಂಬುಲೆನ್ಸ್ ಸಿಬ್ಬಂದಿ ಬಾಬು ಅವರನ್ನು ಪರೀಕ್ಷಿಸಿ, ಅವರು ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಡಿಸಿಪಿ (ಪಶ್ಚಿಮ) ಗಿರೀಶ್ ಎಸ್. ಅವರು, “ಕಚೇರಿಯ ಲೈಟ್ ಗಳನ್ನು ಹಾಕುವ, ತೆಗೆಯುವ ವಿಚಾರವೇ, ಕೊಲೆಗೆ ಪ್ರಚೋದನೆ ನೀಡಿದೆ ಎಂದು ಖಚಿತಪಡಿಸಿದ್ದಾರೆ.



