ನಡೆದಿದೆ. ರೌಡಿಶೀಟರ್ ಟೋಪಿ ನೌಫಾಲ್ ಅನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಉಪ್ಪಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 🟣ಬೆಳ್ತಂಗಡಿ : ಜೈ ಭಜರಂಗ ಬಲಿ ತುಳು ನಾಟಕಕ್ಕೆ ಚಾಲನೆ – ಆರ್ಯನುಬಂಧ ಟೆಲಿ ಫಿಲ್ಮ್ ಟೈಟಲ್ ಬಿಡುಗಡೆ
ಮಂಗಳೂರಿನ ಫೈಸಲ್ನಗರದ ನಿವಾಸಿಯಾಗಿರುವ ರೌಡಿಶೀಟರ್ ಟೋಪಿ ನೌಫಾಲ್, ಮಂಗಳೂರಿನ ನಟೋರಿಯಸ್ ರೌಡಿಯೊಂದಿಗೆ ಸೇರಿ ಡ್ರಗ್ಸ್ ಸೇವನೆ ಮತ್ತು ವಹಿವಾಟು ಮಾಡುತ್ತಿದ್ದ. 2017ರಲ್ಲಿ ಮಂಗಳೂರಿನ ಫರಂಗಿಪೇಟೆಯಲ್ಲಿ ನಡೆದಿದ್ದ ಜೋಡಿ ಕೊಲೆ ಕೇಸ್ನ ಪ್ರಮುಖ ಆರೋಪಿ.


ನೌಫಾಲ್ ಮಾರಿಪಳ್ಳ ಜಬ್ಬಾರ್, ತಲ್ಲತ್ ಗ್ಯಾಂಗ್ ಜೊತೆಗೂ ಗುರುತಿಸಿಕೊಂಡಿದ್ದ. ಬಳಿಕ ತನ್ನದೇ ತಂಡವೊಂದನ್ನು ಕಟ್ಟಿಕೊಂಡು ಡ್ರಗ್ಸ್, ವಸೂಲಿ, ಅಕ್ರಮ ಚಿನ್ನ ವಹಿವಾಟು ಮತ್ತು ಕೊಲೆಯತ್ನ ಮಾಡುತ್ತಿದ್ದ. ನೌಫಾಲ್ ವಿರುದ್ಧ ಮಂಗಳೂರಿನಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.



