Sun. Nov 2nd, 2025

Ujire: ಅಭ್ಯಾಸ್ ಪಿ .ಯು ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಉಜಿರೆ:(ನ.2) ನವೆಂಬರ್ 1 ರಂದು ಅಭ್ಯಾಸ್ ಪಿ .ಯು ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ ನಡೆಯಿತು.

ಇದನ್ನೂ ಓದಿ: ⭕ಕಡಬ: ಮೀನು ಮಾರಾಟ ವಿಚಾರಕ್ಕೆ ಪರಸ್ಪರ ಹೊಡೆದಾಟ – ಪ್ರಕರಣ ದಾಖಲು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭ್ಯಾಸ್ ಪಿ .ಯು ಕಾಲೇಜಿನ ಅಧ್ಯಕ್ಷ ಕಾರ್ತಿಕೇಯ ಎಂ. ಎಸ್ ರವರು ವಹಿಸಿಕೊಂಡು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅಭ್ಯಾಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಶಿಲ್ಪಾ ಹಾಗೂ ಆಡಳಿತ ಅಧಿಕಾರಿ ಪ್ರಮೋದ್ ಗೌಡ ಮತ್ತು ಕಾರ್ಯಕ್ರಮದ ಸಂಯೋಜಕರು , ಅಭ್ಯಾಸ್ ಪಿ .ಯು ಕಾಲೇಜಿನ ಉಪಪ್ರಾಂಶುಪಾಲರಾದ ಚಂದ್ರಶೇಖರ ಗೌಡ ಹಾಗೂ ಪ್ರಭಾರ ಪ್ರಾಂಶುಪಾಲರಾದ ಗುರುಪ್ರಸಾದ್ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರದ ಚಂದ್ರಶೇಖರ ಗೌಡ 70ನೇಯ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕನ್ನಡ ನಾಡು ,ನುಡಿ , ಸಂಸ್ಕೃತಿ ಮತ್ತು ಕರ್ನಾಟಕದ ಏಕೀಕರಣದ ಮಹತ್ವ ಮತ್ತು. ಮಾತೃ ಭಾಷೆ ಕನ್ನಡದಲ್ಲೇ ಓದಿದ ಅದೆಷ್ಟೋ ಉದ್ಯೋಗದವರನ್ನು ನಾವು ದೇಶ ವಿದೇಶದಲ್ಲಿ ಕಾಣುವುದರ ಜೊತೆಗೆ ವಿಶ್ವಮಾನ್ಯತೆ ಪಡೆದಿದ್ದಾರೆ ಹೀಗೆ ಹಲವಾರು ವಿಚಾರಗಳನ್ನ ವಿದ್ಯಾರ್ಥಿಗಳಿಗೆ ಪರಿಚಯಿಸಿದರು.

ಅಧ್ಯಕ್ಷೀಯ ಮಾತುಗಳನ್ನಡಿದ ಕಾರ್ತಿಕೇಯ ಎಂ.ಎಸ್ ಅವರು ಕನ್ನಡ ಭಾಷೆ , ಕನ್ನಡಿಗರ ಮನಸುಗಳ ಜೊತೆಗೆ ಕನ್ನಡಿಗರ ಬದುಕು ಕಟ್ಟುವಂತಹ ಕೆಲಸವನ್ನ ಮಾಡುತ್ತಿದೆ ಹಾಗೂ ಮುಂದಿನ ದಿನಗಳಲ್ಲಿ ಇಂಥಹ ಮೌಲ್ಯದಾಯಕ ಕನ್ನಡ ಕಾಯಕವನ್ನ ಕಟ್ಟುವಂತ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು ಹೀಗೆ ಹಲವಾರು ವಿಚಾರಗಳನ್ನ ತಿಳಿಸಿದರು.

ಪಿ.ಆರ್.ಓ ಧನಂಜಯ ಹಾಗೂ ಎಲ್ಲಾ ಬೋಧಕೇತರ ಸಿಬ್ಬಂದಿ ವರ್ಗದವರೂ, ಸಹಾಯಕ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು , ವಿದ್ಯಾರ್ಥಿ ತನುಶ್ರೀ ಪ್ರಾರ್ಥನೆಗೈದರು, ಕನ್ನಡ ವಿಭಾಗದ ಉಪನ್ಯಾಸಕ ಸುಧೀರ್ ಸ್ವಾಗತಿಸಿ, ನಿರೂಪಿಸಿದರು, ನಿಲಯ ಪಾಲಕರಾದ ಜೀತೇಶ್ ವಂದಿಸಿದರು.

Leave a Reply

Your email address will not be published. Required fields are marked *