ಮೈಸೂರು (ನ.03): ಶಿಕ್ಷಕರನ್ನು ದೇವರ ಸಮಾನ ಎಂದು ಗೌರವಿಸಲಾಗುತ್ತದೆ. ಆದ್ರೆ ಕೆಲವರು ಮಾಡೋ ನೀಚ ಕೃತ್ಯಗಳು ಇಡೀ ಶಿಕ್ಷಕರ ವೃಂದಕ್ಕೆ ಕಳಂಕ ಎನ್ನುವಂತಾಗಿದೆ. ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ ಕೆಲಸ ಮಾಡ್ತಿದ್ದವನು ಅಪ್ರಾಪ್ತೆಯನ್ನೇ ಗರ್ಭಿಣಿ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ತಪ್ಪು ಮಾಡಿದ ಬಳಿಕ ಆರೋಪವನ್ನು ಯುವಕನೋರ್ವನ ಮೇಲೆ ಹಾಕಿದ್ದು, ಇದ್ರಿಂದ ನೊಂದ ಯುವಕ ವಾಯ್ಸ್ ನೋಟ್ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ⭕ಕರ್ನಾಟಕ ಮಲ್ಟಿಫ್ಲೆಕ್ಸ್ಗಳಿಗೆ ಸುಪ್ರೀಂ ಬಿಗ್ ರಿಲೀಫ್
ವಾಯ್ಸ್ ನೋಟ್ನಲ್ಲಿ ಏನಿದೆ?
ಶಾಲೆಯ ದೈಹಿಕ ಶಿಕ್ಷಕನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ. ದೈಹಿಕ ಶಿಕ್ಷಕ ವಿದ್ಯಾರ್ಥಿನಿ ಜೊತೆ ದೈಹಿಕ ಸಂಬಂಧ ಹೊಂದಿದ್ದ ಎನ್ನಲಾಗ್ತಿದ್ದು, ವೈದ್ಯರು ಪರೀಕ್ಷೆ ಮಾಡಿದ ವೇಳೆ ವಿದ್ಯಾರ್ಥಿನಿ ಗರ್ಭಿಣಿ ಅನ್ನೋದು ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.
ಆದ್ರೆ ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ್ದು ಮತ್ತೋರ್ವ ಯುವಕ ಎನ್ನುವ ಆರೋಪ ಕೂಡ ಕೇಳಿ ಬಂದಿತ್ತು. ಹುಡುಗಿ ಜೊತೆ ಸಲುಗೆಯಿಂದ ಮಾತಾಡ್ತಿದ್ದ ಅನ್ನೋ ಕಾರಣಕ್ಕೆ ಆರೋಪ ಮಾಡ್ತಿದ್ದರು ಎನ್ನಲಾಗ್ತಿದೆ.

ಆರೋಪಕ್ಕೆ ನೊಂದು ಯುವಕ ಆತ್ಮಹತ್ಯೆ
ಯುವಕನಿಂದಲೇ ವಿದ್ಯಾರ್ಥಿನಿ ಗರ್ಭಿಣಿ ಎಂಬ ಆರೋಪಕ್ಕೆ ಹೆದರಿದ ಯುವಕ ಮನನೊಂದು ಊರೇ ಬಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗ್ತಿದೆ. ಅ.31 ರಂದು ವಾಯ್ಸ್ ನೋಟ್ ಹಾಕಿ ನಾಪತ್ತೆಯಾಗಿದ್ದ ಯುವಕನ ಶವ ಇದೀಗ ಬೆಟ್ಟದ ತುಂಗಾ ನಾಲೆಯೊಂದರಲ್ಲಿ ಪತ್ತೆಯಾಗಿದೆ. ಬೆಟ್ಟದ ತುಂಗಾ ಗ್ರಾಮದ ನಾಲೆಯೊಂದರ ಬಳಿ ಬೈಕ್, ಚಪ್ಪಲಿ, ಮೊಬೈಲ್, ಜರ್ಕಿನ್ ಬಿಟ್ಟು ಯುವಕ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗ್ತಿದೆ.
ವಾಯ್ಸ್ ನೋಟ್ನಲ್ಲಿ ಏನಿದೆ?
ತನ್ನ ಮೇಲೆ ಬಂದ ಆರೋಪಕ್ಕೆ ಮನನೊಂದ ಪಿರಿಯಾಪಟ್ಟಣ ತಾಲೂಕಿನ ಕುಡಕೂರು ನಿವಾಸಿ ರಾಮು (27) ಆತ್ಮಹತ್ಯೆಗೆ ಶರಣಾಗಿದ್ದಾರೆ. ನನಗೂ ಆಕೆಗೂ ಯಾವುದೇ ಸಂಬಂಧ ಇಲ್ಲ, ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ ಎಂದು ವಾಯ್ಸ್ ನೋಟ್ನಲ್ಲಿ ತಿಳಿಸಿದ್ದಾನೆ.
ಈ ಆರೋಪದಿಂದ ನನಗೆ ತಲೆ ಎತ್ತಿ ನಡೆಯಲು ಸಾಧ್ಯವಾಗ್ತಿಲ್ಲ. ಘಟನೆಯಿಂದ ತುಂಬಾ ನೋವಾಗಿದೆ. ಡಾಕ್ಟರ್ ಬಂದು ಸ್ಟೂಡೆಂಟ್ ಚೆಕ್ ಮಾಡಿದ್ದ ವೇಳೆ ಆಕೆ ಪ್ರೆಗ್ನೆಂಟ್ ಅಂತ ಗೊತ್ತಾಗಿದೆ. ಶಾಲೆಗೆ ಕಳಂಕ ಬರುತ್ತೆ ಅಂತ ಕೇಸ್ ಮುಚ್ಚಿ ಹಾಕ್ತಿದ್ದಾರೆ. ನಾನು ಹುಡುಗಿ ಜೊತೆ ಮಾತಾಡಿದ್ದಕ್ಕೆ ನನ್ನ ಮೇಲೆ ಆರೋಪ ಮಾಡ್ತಿದ್ದಾರೆ ಎಂದು ಯುವಕ ವಾಯ್ಸ್ ನೋಟ್ನಲ್ಲಿ ಹೇಳಿದ್ದಾನಂತೆ.

ಇದಕ್ಕೆಲ್ಲಾ ಕಾರಣ ಪಿಟಿ ಮಾಸ್ಟರ್!
ಶಾಲೆಯ ಪಿಟಿ ಟೀಚರ್ ಇದಕ್ಕೆಲ್ಲಾ ಕಾರಣ. ಅವ್ರು ಮಾಡಿದ ತಪ್ಪನ್ನು ನನ್ನ ಮೇಲೆ ಹಾಕಿದ್ದಾರೆ. ಹೀಗಾಗಿ ತಾನು ಸೂಸೈಡ್ ಮಾಡಿಕೊಳ್ಳುತ್ತಿದ್ದೇನೆ ಎಂದು ವಾಯ್ಸ್ ನೋಟ್ ಸೆಂಡ್ ಮಾಡಿ ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಪಿರಿಯಾಪಟ್ಟಣ ತಾಲೂಕಿನ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗ್ತಿದೆ. ಡಿಎನ್ಎ ಟೆಸ್ಟ್ ಮೂಲಕ ತಪ್ಪಿತಸ್ಥರ ಪತ್ತೆಗಾಗಿ ಆಗ್ರಹಿಸಿದ್ದು. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.



