Mon. Nov 3rd, 2025

Vitla: ತೆಂಗಿನಕಾಯಿ ಕೀಳುತ್ತಿದ್ದ ವೇಳೆ ವಿದ್ಯುತ್‌ ಸ್ಪರ್ಶಿಸಿ ಯುವಕ ಸಾವು

ವಿಟ್ಲ:(ನ.3)ತೆಂಗಿನಕಾಯಿ ಕೀಳುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಶಾಕ್‌ಗೆ ಒಳಗಾಗಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಂಟ್ವಾಳ ತಾಲ್ಲೂಕಿನ ವಿಟ್ಲದ ಅಳಿಕೆ ಗ್ರಾಮದಲ್ಲಿ‌ ನಡೆದಿದೆ.

ಇದನ್ನೂ ಓದಿ: 🏆World Cup 2025: ವಿಶ್ವಕಪ್‌ ಟ್ರೋಫಿ ಗೆದ್ದ ಭಾರತದ ಸಿಂಹಿಣಿಯರು

ಮೃತರನ್ನು ಅಳಿಕೆ ನಿವಾಸಿ ಇಸ್ಮಾಯಿಲ್ (37) ಎಂದು ಗುರುತಿಸಲಾಗಿದೆ. ಇಸ್ಮಾಯಿಲ್ ಅವರು ತಮ್ಮ ತೋಟದಲ್ಲಿ ತೆಂಗಿನ ಮರದಿಂದ ಕಾಯಿಗಳನ್ನು ತೆಗೆಯಲು ಅಲ್ಯೂಮಿನಿಯಂ ಪೈಪ್ ಬಳಸಿದ್ದರು.

ಈ ಸಂದರ್ಭದಲ್ಲಿ, ಅಲ್ಯೂಮಿನಿಯಂ ಪೈಪ್ ಆಕಸ್ಮಿಕವಾಗಿ ಹಾದುಹೋಗುತ್ತಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದೆ. ತಕ್ಷಣವೇ ಇಸ್ಮಾಯಿಲ್ ಅವರು ಪ್ರಬಲ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ. ಶಾಕ್‌ಗೆ ಒಳಗಾದ ಇಸ್ಮಾಯಿಲ್ ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *