ಬಂಟ್ವಾಳ: ಬಂಟ್ವಾಳ ತಾಲೂಕು ವೀರಕಂಭ ಗ್ರಾಮ ಪಂಚಾಯತ್ ನ 2025 – 26 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ ವಿರಕಂಭ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷ ಲಲಿತ ರವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜರಗಿತು.

ಇದನ್ನೂ ಓದಿ: ⭕”ನಿನ್ನ ಪಾಡಿಗೆ ನೀನಿರು, ನನ್ನ ಪಾಡಿಗೆ ನಾನಿರ್ತೀನಿ” – ಸೂರಜ್ ಗೆ ನೇರವಾಗಿ ಹೇಳಿದ ರಾಶಿಕಾ
ಗ್ರಾಮ ಸಭೆ ಮಾರ್ಗದರ್ಶಿ ಅಧಿಕಾರಿಯಾಗಿ ಬಂಟ್ವಾಳ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿನಯ ಕುಮಾರಿ ಭಾಗವಹಿಸಿದ್ದರು.
ವೀರಕಂಭ ಗ್ರಾಮದಲ್ಲಿ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಅಂಗಡಿಗಳಿಂದ ಗ್ರಾಮ ಪಂಚಾಯತ್ ಆದಾಯಕ್ಕೆ ತೊಂದರೆ ಆಗುತಿದ್ದು ಕೂಡಲೇ ಈ ಬಗ್ಗೆ ಕ್ರಮ ವಹಿಸಬೇಕು,
ವೀರಕಂಬ ಗ್ರಾಮಕ್ಕೆ ಪೂರ್ಣ ಅವಧಿಗೆ ಗ್ರಾಮ ಕರಣಿಕರ ನೇಮಕ ಮಾಡಬೇಕು,
9-11 ಲೇ ಔಟ್ ಅನುಮತಿ ಬೂಡದ ಬದಲು ಪಂಚಾಯತ್ ಹಂತದಲ್ಲಿ ಆಗಬೇಕು, ಗ್ರಾಮದಲ್ಲಿ ನಿಗದಿಪಡಿಸಿದ ಗೋ ಮಾಲ ಜಾಗವನ್ನು ಗುರುತಿಸಿ ಗಡಿ ಗುರುತು ಮಾಡಬೇಕು,
ನಾರುಕೋಡಿ ಪರಿಸರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಲ್ಲಿನ ಕೋರೆಯಿಂದ ಆಗುವ ತೊಂದರೆ ಬಗ್ಗೆ, ಸೂಕ್ತ ಕ್ರಮಕ್ಕೆ ಗ್ರಾಮಸ್ಥರು ಒತ್ತಾಯಿಸಿದರು.

ಗ್ರಾಮದಲ್ಲಿ ಘಣತ್ಯಾಜ್ಯ ನಿರ್ವಹಣಾ ಘಟಕ ಪ್ರಾರಂಭವಾಗಿದ್ದು ಇದರ ಸದ್ಬಳಕೆಗೆ ಗ್ರಾಮಸ್ಥರು ಸಹಕರಿಸಬೇಕೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನವಿ ಮಾಡಿದರು.
ಇಲಾಖೆವಾರು ಮುಖ್ಯಸ್ಥರುಗಳಾದ ಅರೋಗ್ಯ ಇಲಾಖೆ, ಕೃಷಿ ಇಲಾಖೆ, ಮೆಸ್ಕಾಂ ಇಲಾಖೆ, ಶಿಕ್ಷಣ ಇಲಾಖೆ,, ಶಿಶು ಅಭಿವೃದ್ಧಿ ಇಲಾಖೆ,ಕಂದಾಯ ಇಲಾಖೆಯವರು ತಮ್ಮ ತಮ್ಮ ಇಲಾಖೆಯ ಇಲಾಖಾ ಮಾಹಿತಿ ನೀಡಿದರು.

ಗ್ರಾಮಸ್ಥರಿಂದ ವಿವಿಧ ಬೇಡಿಕೆಗಳ ಮನವಿಯನ್ನು ಸ್ವೀಕರಿಸಲಾಯಿತು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಪಂಚಾಯತ್ ಸದಸ್ಯರುಗಳಾದ ದಿನೇಶ್ ಪೂಜಾರಿ,, ಸಂದೀಪ್ ಪೂಜಾರಿ, ಜಯಪ್ರಸಾದ್, ನಿಶಾಂತ್ ರೈ, ಅಬ್ದುಲ್ ರೆಹಿಮಾನ್,,ಜಯಂತಿ, ಮೀನಾಕ್ಷಿ, ಉಮಾವತಿ, ಶೀಲಾ ನಿರ್ಮಲ ವೇಗಸ್, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿರಕಂಭ ಗ್ರಾಮಸ್ಥರು, ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರುಗಳು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಗ್ರಾಮ ಸಭೆಯಲ್ಲಿ ಭಾಗವಹಿಸಿದ್ದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಭು ಕುಮಾರ್ ಶರ್ಮ ಸ್ವಾಗತಿಸಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ನವೀನ್ ರಾಬರ್ಟ್ ವರದಿ ವಾಚಿಸಿದರು. ಪಂಚಾಯತ್ ಸದಸ್ಯ ಶೀಲಾ ನಿರ್ಮಲ ವೇಗಸ್ ವಂದಿಸಿದರು.


