ಬೆಳ್ತಂಗಡಿ: ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಬಳ್ಳಮಂಜದ ಆಡಳಿತ ಮೊಕ್ತೇಸರ ಹರ್ಷ ಸಂಪಿಗೆತ್ತಾಯ ಇವರಿಗೆ ರೂ 5 ಲಕ್ಷ ಡಿ ಡಿ ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ದಿನೇಶ ಡಿ ಯವರು ವಿತರಿಸಿದರು.

ಇದನ್ನೂ ಓದಿ: 🟣ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ 13 ನೇ ವರ್ಷದ ಪಾದಯಾತ್ರೆ ಬಗ್ಗೆ ಗಣ್ಯರ ಸಮಾಲೋಚನಾ ಸಭೆ
ಕಾರ್ಯಕ್ರಮದಲ್ಲಿ ಗುರುವಾಯನಕೆರೆ ವಿಭಾಗದ ಯೋಜನಾಧಿಕಾರಿ ಅಶೋಕ ಬಿ, ವಲಯ ಅಧ್ಯಕ್ಷ ಜಯ ಪೂಜಾರಿ, ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ ಗೋಪಾಲ ಪೂಜಾರಿ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಹರ್ಷ ಬಳ್ಳಮಂಜ, ಮಚ್ಚಿನ ಒಕ್ಕೂಟ ಅಧ್ಯಕ್ಷೆ ಸುಧಾ, ಗಣ್ಯರಾದ ಡಾ ಕೆ ಎಂ ಶೆಟ್ಟಿ ಬಳ್ಳಮಂಜ, ವಲಯ ಮೇಲ್ವಿಚಾರಕ ಕೇಶವ ನಾಯ್ಕ , ಸೇವಾಪ್ರತಿನಿಧಿಗಳಾದ ಪರಮೇಶ್ವರ ಮಚ್ಚಿನ, ನಂದಿನಿ ಮತ್ತು ಊರಿನ ಗಣ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.





