Tue. Nov 4th, 2025

Belthangady: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ 13 ನೇ ವರ್ಷದ ಪಾದಯಾತ್ರೆ ಬಗ್ಗೆ ಗಣ್ಯರ ಸಮಾಲೋಚನಾ ಸಭೆ

ಬೆಳ್ತಂಗಡಿ: ಪ್ರತೀ ವರ್ಷ ಪಾದಯಾತ್ರೆ ಯಲ್ಲಿ ಕ್ಷೇತ್ತದ ಭಕ್ತರು ಶ್ರದ್ಧಾ ಭಕ್ತಿಯಿಂದ ಸೇರುತ್ತಾರೆ. ನಾವೆಲ್ಲರೂ ಭಕ್ತಿಯಿಂದ ಪಾಲ್ಗೊಂಡು ಪುನೀತರಾಗೋಣ. ಇತ್ತೀಚೆಗೆ ಕ್ಷೇತ್ರಕ್ಕೆ ಅಪಚಾರ ಮಾಡುವ ಕಾರ್ಯ ನಡೆಯಿತು. ಆದರೆ ಅಲ್ಲಿನ‌ ಪಾವಿತ್ರ್ಯತೆಗೆ ಧಕ್ಕೆ ತರಲು ಯಾರಿಂದಲೂ ಸಾಧ್ಯವಿಲ್ಲ. ಅದು ಆಗುವುದೂ ಇಲ್ಲ ಎಂದು ಮೆಸ್ಕಾಂ ನಿಗಮದ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.

ಇದನ್ನೂ ಓದಿ: 🟣ಉಜಿರೆ : ಅನುಗ್ರಹ ಕಾಲೇಜಿನಲ್ಲಿ ಕನ್ನಡ ಸಂವರ್ಧನೆ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯವ ಲಕ್ಷ ದೀಪೋತ್ಸವ ಮಹೋತ್ಸವದ ಪ್ರಯುಕ್ಕ ನ.15 ರಂದು ನಡೆಯುವ 13 ನೇ ವರ್ಷದ ಪಾದಯಾತ್ರೆಯ ಬಗ್ಗೆ ಉಜಿರೆ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ಮಂಗಳವಾರ
ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಪಾದಯಾತ್ರೆಯ ರೂಪುರೇಷೆಗಳ ಬಗ್ಗೆ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜು ಕಾರ್ಯನಿರ್ವಹಣಾಧಿಕಾರಿ ಪೂರನ್ ವರ್ಮ ಮಾಹಿತಿ‌ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಮಾತನಾಡಿ, ಕ್ಷೇತ್ರದ ಭಕ್ತರಾಗಿ ನಾವೆಲ್ಲರೂ ಆರಂಭಿಸಿದ ಈ ಪಾದಯಾತ್ರೆ ಇಂದು ಒಂದು
ಪರಂಪರೆಯಾಗಿ ಪರಿವರ್ತನೆಯಾಗಿದೆ. ಶ್ರೀ ಕ್ಷೇತ್ರ ಶಿಸ್ತಿನ ಪ್ರತೀಕವೂ ಆಗಿದೆ. ಐನೂರು ಜನರಿಂದ ಆರಂಭವಾದ ಪಾದಯಾತ್ರೆ ಇಂದು ಜನಸಮೂಹದ ಒಗ್ಗೂಡುವಿಕೆಯ ಮಹಾ ಶಕ್ತಿಯಾಗಿ ಪರಿವರ್ತನೆಯಾಗಿದೆ. ಕೀರ್ತಿಶೇಷರಾದ ವಿಜಯರಾಘವ ಪಡ್ವೆಟ್ನಾಯ ಮತ್ತು ಡಾ. ಯಶೋವರ್ಮ ಅವರು ಅಂದು ದಿವ್ಯ ಮಾರ್ಗದರ್ಶನ ನೀಡಿದ್ದನ್ನು ನೆನಪಿಸುತ್ತೇವೆ. ಈ ಪಾದಯಾತ್ರೆ
ಧರ್ಮಸ್ಥಳ ಕ್ಷೇತ್ರದ‌ ಮಾತ್ರ‌ ಕಾರ್ಯಕ್ರಮ ಅಲ್ಲ. ಇದು ನಮ್ಮೆಲ್ಲರ ಕಾರ್ಯಕ್ರಮ ಎಂದಾಗಬೇಕು ಎಂದರು.

ಗ್ರಾ.ಯೋಜನೆಯ ಕೇಂದ್ರ ಕಚೇರಿಯ ಮುಖ್ಯ ಹಣಕಾಸು ಅಧಿಕಾರಿ ಶಾಂತಾರಾಮ ಪೈ ಮಾತನಾಡಿದರು.
ಜನಜಾಗೃತಿ ವೇದಿಕೆಯ ತಾ. ಅಧ್ಯಕ್ಷ ಕಾಸಿಂ ಮಲ್ಲಿಗೆಮನೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ವಂದ್ರ, ಬದುಕು ಕಟ್ಟೋಣ ಸೇವಾ ಟ್ರಸ್ಟ್ ಸಂಚಾಲಕ ಮೋಹನ್ ಕುಮಾರ್, ಸತ್ಯದರ್ಶನ ಕಾರ್ಯಕ್ರಮ ಸಮಿತಿಯ ಪ್ರಧಾನ ಸಂಚಾಲಕ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಉಜಿರೆ ಗ್ರಾ.ಪಂ ಅಧ್ಯಕ್ಷೆ ಉಷಾಕಿರಣ‌ ಕಾರಂತ್ ಉಪಸ್ಥಿತರಿದ್ದರು.

ಗ್ರಾ.ಯೋ ಯೋಜನಾಧಿಕಾರಿ ಯಶೋಧರ ಸ್ವಾಗತಿಸಿದರು. ಕೃಷಿ ವಿಭಾಗದ ಯೋಜನಾಧಿಕಾರಿ ರಾಮ್ ಕುಮಾರ್ ನಿರೂಪಿಸಿದರು.
ಉಜಿರೆ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್ ವಂದಿಸಿದರು.

Leave a Reply

Your email address will not be published. Required fields are marked *