Tue. Nov 4th, 2025

Bigg Boss: ಸುದೀಪ್ ಎದುರೇ ರಿಷಾ ಎಲಿಮಿನೇಷನ್..?

Bigg Boss: ಭಾರತದ ವಿವಿಧ ಭಾಷೆಗಳಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತದೆ. ಎಲ್ಲಾ ಬಿಗ್ ಬಾಸ್​ಗಳಲ್ಲೂ ಮೂಲ ನಿಯಮ ಒಂದೇ ರೀತಿಯಲ್ಲಿ ಇದೆ. ಅದರಲ್ಲಿ ಯಾರ ಮೇಲೂ ಹಲ್ಲೆ ಮಾಡಬಾರದು ಎಂಬುದೂ ಒಂದು. ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಈ ನಿಯಮವನ್ನು ರಿಷಾ ಅವರು ಬ್ರೇಕ್ ಮಾಡಿದ್ದಾರೆ.

ಗಿಲ್ಲಿ ಮೇಲೆ ಅವರು ಕೈ ಮಾಡಿದ್ದಾರೆ. ಆ ಬಳಿಕ ಅದನ್ನು ತಮಾಷೆಗೆ ಮಾಡಿದ್ದು ಎಂದು ಸಬೂಬು ನೀಡಿದ್ದಾರೆ. ಅವರು ಹೊರಹೋಗಬೇಕು ಎಂದು ಅನೇಕರು ಆಗ್ರಹಿಸಿದ್ದರು. ಆದರೆ, ಆ ರೀತಿ ಆಗಿಲ್ಲ. ಈಗ ನವೆಂಬರ್ 3ರ ಎಪಿಸೋಡ್ ಕೊನೆಯಲ್ಲಿ ಈ ಬಗ್ಗೆ ದೊಡ್ಡದಾಗಿ ಸೂಚನೆ ನೀಡಲಾಗಿದೆ.ಕಳೆದ ಸೀಸನ್​ ಅಲ್ಲಿ ರಂಜಿತ್ ಹಾಗೂ ಲಾಯರ್ ಜಗದೀಶ್ ಮಧ್ಯೆ ಕಿರಿಕ್ ಆದಾಗ ಸಾಕಷ್ಟು ಚರ್ಚೆಗಳು ನಡೆದವು. ಆ ಕ್ಷಣವೇ ಬಿಗ್ ಬಾಸ್ ಇಬ್ಬರನ್ನೂ ಮನೆಯಿಂದ ಹೊರಕ್ಕೆ ಹಾಕಿದರು. ಈ ಬಾರಿಯೂ ಹಾಗೆಯೇ ಮಾಡಲಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಬಿಗ್ ಬಾಸ್ ಕಡೆಯಿಂದ ಯಾವುದೇ ಆದೇಶ ಬಂದಿಲ್ಲ. ಕೊನೆಯಲ್ಲಿ ಬಿಗ್ ಬಾಸ್ ಸೂಚನೆ ಒಂದನ್ನು ನೀಡಿದ್ದಾರೆ.

ನಡೆದ ಘಟನೆ ಏನು?
ರಿಷಾ ಅವರು ಬಾತ್​ರೂಂನಲ್ಲಿ ಸ್ನಾನಕ್ಕೆ ಹೊರಟಿದ್ದರು. ಈ ವೇಳೆ ಬಕೆಟ್​ನಲ್ಲಿ ನೀರು ತುಂಬಿಸಿ ಅದನ್ನು ನೀಡೋದಾಗಿ ಗಿಲ್ಲಿಗೆ ಹೇಳಿದ್ದರು. ಬಕೆಟ್ ತುಂಬುತ್ತಿದ್ದಂತೆ ಅವರು ಬಾಗಿಲು ಹಾಕಿಕೊಂಡರು. ಕೇಳಿದ್ದಕ್ಕೆ ಸ್ನಾನ ಆದಮೇಲೆ ಕೊಡುತ್ತೇನೆ ಎಂದರು. ಇದರಿಂದ ಸಿಟ್ಟಾದ ಗಿಲ್ಲಿ ಅವರ ಬಟ್ಟೆಗಳನ್ನು ತಂದು ಬಾತ್​ರೂಂ ಹೊರಗೆ ಇಟ್ಟರು. ಇದರಿಂದ ಸಿಟ್ಟಾದ ರಿಷಾ ಅವರು ಗಿಲ್ಲಿಗೆ ಹೊಡೆದಿದ್ದಾರೆ. ಅಲ್ಲದೆ ಅವರನ್ನು ತಳ್ಳಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ.


‘ಇಂದಿನ ಸಂಚಿಕೆಯಲ್ಲಿ ಮನೆಯ ಸದಸ್ಯರು ಬಿಗ್ ಬಾಸ್​ನ ಹಲವು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಎಲ್ಲಾ ನಿಯಮ ಉಲ್ಲಂಘನೆಗಳನ್ನು, ವಾರಾಂತ್ಯದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪರವರು ಚರ್ಚಿಸಿ, ವಿಶ್ಲೇಷಿಸಿ ನ್ಯಾಯ ಒದಗಿಸುತ್ತಾರೆ’ ಎಂದು ಬರೆಯಲಾಗಿದೆ.

Leave a Reply

Your email address will not be published. Required fields are marked *