Bigg Boss: ಭಾರತದ ವಿವಿಧ ಭಾಷೆಗಳಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತದೆ. ಎಲ್ಲಾ ಬಿಗ್ ಬಾಸ್ಗಳಲ್ಲೂ ಮೂಲ ನಿಯಮ ಒಂದೇ ರೀತಿಯಲ್ಲಿ ಇದೆ. ಅದರಲ್ಲಿ ಯಾರ ಮೇಲೂ ಹಲ್ಲೆ ಮಾಡಬಾರದು ಎಂಬುದೂ ಒಂದು. ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಈ ನಿಯಮವನ್ನು ರಿಷಾ ಅವರು ಬ್ರೇಕ್ ಮಾಡಿದ್ದಾರೆ.

ಗಿಲ್ಲಿ ಮೇಲೆ ಅವರು ಕೈ ಮಾಡಿದ್ದಾರೆ. ಆ ಬಳಿಕ ಅದನ್ನು ತಮಾಷೆಗೆ ಮಾಡಿದ್ದು ಎಂದು ಸಬೂಬು ನೀಡಿದ್ದಾರೆ. ಅವರು ಹೊರಹೋಗಬೇಕು ಎಂದು ಅನೇಕರು ಆಗ್ರಹಿಸಿದ್ದರು. ಆದರೆ, ಆ ರೀತಿ ಆಗಿಲ್ಲ. ಈಗ ನವೆಂಬರ್ 3ರ ಎಪಿಸೋಡ್ ಕೊನೆಯಲ್ಲಿ ಈ ಬಗ್ಗೆ ದೊಡ್ಡದಾಗಿ ಸೂಚನೆ ನೀಡಲಾಗಿದೆ.ಕಳೆದ ಸೀಸನ್ ಅಲ್ಲಿ ರಂಜಿತ್ ಹಾಗೂ ಲಾಯರ್ ಜಗದೀಶ್ ಮಧ್ಯೆ ಕಿರಿಕ್ ಆದಾಗ ಸಾಕಷ್ಟು ಚರ್ಚೆಗಳು ನಡೆದವು. ಆ ಕ್ಷಣವೇ ಬಿಗ್ ಬಾಸ್ ಇಬ್ಬರನ್ನೂ ಮನೆಯಿಂದ ಹೊರಕ್ಕೆ ಹಾಕಿದರು. ಈ ಬಾರಿಯೂ ಹಾಗೆಯೇ ಮಾಡಲಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಬಿಗ್ ಬಾಸ್ ಕಡೆಯಿಂದ ಯಾವುದೇ ಆದೇಶ ಬಂದಿಲ್ಲ. ಕೊನೆಯಲ್ಲಿ ಬಿಗ್ ಬಾಸ್ ಸೂಚನೆ ಒಂದನ್ನು ನೀಡಿದ್ದಾರೆ.


ನಡೆದ ಘಟನೆ ಏನು?
ರಿಷಾ ಅವರು ಬಾತ್ರೂಂನಲ್ಲಿ ಸ್ನಾನಕ್ಕೆ ಹೊರಟಿದ್ದರು. ಈ ವೇಳೆ ಬಕೆಟ್ನಲ್ಲಿ ನೀರು ತುಂಬಿಸಿ ಅದನ್ನು ನೀಡೋದಾಗಿ ಗಿಲ್ಲಿಗೆ ಹೇಳಿದ್ದರು. ಬಕೆಟ್ ತುಂಬುತ್ತಿದ್ದಂತೆ ಅವರು ಬಾಗಿಲು ಹಾಕಿಕೊಂಡರು. ಕೇಳಿದ್ದಕ್ಕೆ ಸ್ನಾನ ಆದಮೇಲೆ ಕೊಡುತ್ತೇನೆ ಎಂದರು. ಇದರಿಂದ ಸಿಟ್ಟಾದ ಗಿಲ್ಲಿ ಅವರ ಬಟ್ಟೆಗಳನ್ನು ತಂದು ಬಾತ್ರೂಂ ಹೊರಗೆ ಇಟ್ಟರು. ಇದರಿಂದ ಸಿಟ್ಟಾದ ರಿಷಾ ಅವರು ಗಿಲ್ಲಿಗೆ ಹೊಡೆದಿದ್ದಾರೆ. ಅಲ್ಲದೆ ಅವರನ್ನು ತಳ್ಳಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ.

‘ಇಂದಿನ ಸಂಚಿಕೆಯಲ್ಲಿ ಮನೆಯ ಸದಸ್ಯರು ಬಿಗ್ ಬಾಸ್ನ ಹಲವು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಎಲ್ಲಾ ನಿಯಮ ಉಲ್ಲಂಘನೆಗಳನ್ನು, ವಾರಾಂತ್ಯದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪರವರು ಚರ್ಚಿಸಿ, ವಿಶ್ಲೇಷಿಸಿ ನ್ಯಾಯ ಒದಗಿಸುತ್ತಾರೆ’ ಎಂದು ಬರೆಯಲಾಗಿದೆ.


