Wed. Nov 5th, 2025

ಆರಂಬೋಡಿ: ಆರಂಬೋಡಿ ಮತ್ತು ಗುಂಡೂರಿ ಬಿಜೆಪಿ ಶಕ್ತಿಕೇಂದ್ರದಲ್ಲಿ ಅಭ್ಯಾಸವರ್ಗ

ಆರಂಬೋಡಿ : ಆರಂಬೋಡಿ ಮತ್ತು ಗುಂಡೂರಿ ಬಿಜೆಪಿ ಶಕ್ತಿಕೇಂದ್ರ ‘ಅಭ್ಯಾಸ ವರ್ಗ’ ಕಾರ್ಯಕ್ರಮ ನವೆಂಬರ್ 04 ರಂದು ಕೂಡುರಸ್ತೆ ಶ್ರೀನಿವಾಸ ಶೆಟ್ಟಿಗಾರ್ ಸಭಾಂಗಣದಲ್ಲಿ ನೆರವೇರಿತು. ಆರಂಬೋಡಿ ಗ್ರಾಮದ ಬಿಜೆಪಿ ಹಿರಿಯ ಕಾರ್ಯಕರ್ತರಾದ ನೋಣಯ್ಯ ಶೆಟ್ಟಿ ಕೊಡ್ಯೇಲುಗುತ್ತು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಇದನ್ನೂ ಓದಿ: 🔴ಗುರುವಾಯನಕೆರೆ : ಉದ್ಯಮಿ ಶಶಿಧರ ಶೆಟ್ಟಿ ಬರೋಡರವರಿಂದ ಸ್ವ-ಉದ್ಯೋಗಕ್ಕೆ ಸಹಕಾರ

ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜ ರವರು ಉದ್ಘಾಟನಾ ಭಾಷಣ ಮಾಡಿದರು. ಮಂಡಲ ಕಾರ್ಯದರ್ಶಿ ಸುಂದರ್ ಹೆಗ್ಡೆ ಮೂಡುಕೋಡಿ, ಹಿರಿಯ ಕಾರ್ಯಕರ್ತರಾದ ನಾರಾಯಣ ಪೂಜಾರಿ ಪಾಡ್ಯಾರು, ಕೃಷ್ಣಪ್ಪ ದೇವಾಡಿಗ, ನೋಣಯ್ಯ ಪೂಜಾರಿ ಕೋರ್ಲೊಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಪಿ. ಮಠ ಸ್ವಾಗತಿಸಿ ಮಂಡಲ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಆಶಾ ಎಸ್ ಶೆಟ್ಟಿ ವಂದಿಸಿದರು.


ನಮ್ಮ ವೈಚಾರಿಕತೆ ಮತ್ತು ಪಂಚ ಪರಿವರ್ತನೆ ವಿಷಯದ ಬಗ್ಗೆ ಮಂಡಲ ಉಪಾಧ್ಯಕ್ಷರಾದ ಮೋಹನ್ ಅಂಡಿಂಜೆ , ಬೂತ್ ಸಂಘಟನೆ ಮತ್ತು ಸ್ಥಳೀಯ ಆಡಳಿತದೊಂದಿಗೆ ನಮ್ಮ ಪಾತ್ರ ಈ ವಿಷಯದ ಬಗ್ಗೆ ಜಿಲ್ಲಾ ಉಪಾಧ್ಯಕ್ಷರಾದ ಜಯಂತ್ ಕೋಟ್ಯಾನ್, ವಿಕಸಿತ ಭಾರತದ ಅಮೃತ ಕಾಲದಲ್ಲಿ ನಮ್ಮ ಸಕ್ರೀಯತೆ ವಿಷಯದ ಬಗ್ಗೆ ಜಿಲ್ಲಾ ಕಾರ್ಯದರ್ಶಿಗಳಾದ ಸೀತಾರಾಮ್ ಬೆಳಾಲ್ ಬೈಠಕ್ ನೀಡಿದರು. ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ವಿಜಯ ರಮೇಶ್ ಕುಂಜಾಡಿ, ಜಿಲ್ಲಾ ಕೆ.ಎಂ.ಎಫ್ ನ ನಿರ್ದೇಶಕರಾದ ಪ್ರಭಾಕರ ಹುಲಿಮೇರು, ಆರಂಬೋಡಿ ಶಕ್ತಿಕೇಂದ್ರ ಅಧ್ಯಕ್ಷರಾದ ಸುರೇಂದ್ರ ಶೆಟ್ಟಿ ಅಜ್ಜಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಮಾರೋಪ ಅವಧಿಯಲ್ಲಿ ಮಂಡಲ ಉಪಾಧ್ಯಕ್ಷರಾದ ಕೊರಗಪ್ಪ ಗೌಡ ಸಮಾರೋಪ ಭಾಷಣ ಮಾಡಿದರು. ಸೀತಾರಾಮ್ ಬೆಳಾಲ್ ಬೂತ್ ವರದಿ ಪಡೆದುಕೊಂಡರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ಚಂದ್ರ ಜೈನ್ ಜಂತೋಡಿ, ಗುಂಡೂರಿ ಶಕ್ತಿಕೇಂದ್ರದ ಅಧ್ಯಕ್ಷರಾದ ದಯಾನಂದ ಗುಂಡೂರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ದೀಕ್ಷಿತಾ ಗುಂಡೂರಿ ಧನ್ಯವಾದ ಸಮರ್ಪಿಸಿದರು. ಬೂತ್ ಸಂಖ್ಯೆ 135ರ ಕಾರ್ಯದರ್ಶಿ ಚಂದ್ರಿಕಾ ಶೆಟ್ಟಿಗಾರ್ ಬರಾಯಿ ಕಾರ್ಯಕ್ರಮ ನಿರೂಪಿಸಿದರು.
ಬಿಜೆಪಿ ಗೀತೆಯೊಂದಿಗೆ ಸಂಪದ ಆರಂಭ ಆಗಿ, ಶಾಂತಿ ಮಂತ್ರದೊಂದಿಗೆ ಮುಕ್ತಾಯಗೊಂಡಿತು.

Leave a Reply

Your email address will not be published. Required fields are marked *