Wed. Nov 5th, 2025

Belthangady: ಮಹಡಿಯ ಕಾರಿಡಾರ್‌ನಿಂದ ಆಯತಪ್ಪಿ ತೋಡಿಗೆ ಬಿದ್ದ ಕಾರ್ಮಿಕ ಮೃತ್ಯು

ಬೆಳ್ತಂಗಡಿ: ‌ ಉಪ್ಪಿನಂಗಡಿ ಹೋಟೆಲೊಂದರ ಕಾರ್ಮಿಕ ಮೊದಲ ಮಹಡಿಯ ಕಾರಿಡಾರ್‌ನಿಂದ ಆಯತಪ್ಪಿ ಪಕ್ಕದಲ್ಲಿ ಹರಿಯುವ ತೋಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಇದನ್ನೂ ಓದಿ: ⭕ಬೆಳ್ತಂಗಡಿ: ಪದ್ಮುಂಜದಲ್ಲಿ‌ ವ್ಯಕ್ತಿಯೋರ್ವನಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ ಪ್ರಕರಣ

ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಬನಾರಿ ಮನೆ ನಿವಾಸಿ ಗಣೇಶ್ ನಾಯ್ಕ್ (60) ಎಂಬವರೇ ಮೃತಪಟ್ಟ ದುರ್ದೈವಿಯಾಗಿದ್ದು, ಇವರು ಉಪ್ಪಿನಂಗಡಿಯ ಮೊದಲ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊಟೇಲೊಂದರಲ್ಲಿ ಕಾರ್ಮಿಕರಾಗಿದ್ದು, ನಸುಕಿನ ವೇಳೆ ಎದ್ದು ಕಾರಿಡಾರ್ ಬಳಿ ಬಂದಾಗ ಅಯತಪ್ಪಿ ಕೆಳಗಿನ ತೋಡಿಗೆ ಬಿದ್ದರು.

ಈ ವೇಳೆ ತಲೆಗೆ ಗಂಭೀರ ಸ್ವರೂಪದ ಗಾಯವನ್ನು ಪಡೆದ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿ ಮೃತರ ಮಗ ಜಗದೀಶ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *