ಚಿಕ್ಕಮಗಳೂರು: ಸರ್ವೆ ಮಾಡಲು ಬಂದ ಅಧಿಕಾರಿಗಳ ಮುಂದೆ ದೈವ ಬಂದಿದೆ ಎಂದು ಹೈಡ್ರಾಮಾ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಚಿಕ್ಕನಗುಂಡಿ ಗ್ರಾಮದಲ್ಲಿ ನಡೆದಿದೆ.

ಕೊಪ್ಪ ತಾಲೂಕಿನ ಚಿಕ್ಕನಗುಂಡಿ ಗ್ರಾಮದ ಸುರೇಶ್ ಹಾಗೂ ಅವರ ತಮ್ಮನ ನಡುವೆ ಪಿತ್ರಾರ್ಜಿತ ಆಸ್ತಿಗಾಗಿ ಗಲಾಟೆ ನಡೆಯುತ್ತಿದ್ದು, ಕೊಪ್ಪ JMFC ಕೋರ್ಟ್ ನಿಂದ ಸರ್ವೆ ನಡೆಸುವಂತೆ ಆದೇಶ ನೀಡಿತ್ತು. ಅದರಂತೆ ಸರ್ವೇ ನಡೆಸೋಕೆ ಅಂತಾ ಸರ್ವೇ ಅಧಿಕಾರಿಗಳು ತೆರಳಿದ್ದಾರೆ. ಈ ವೇಳೆ ಸುರೇಶ್ ಸರ್ವೆ ಮಾಡುವ ಸ್ಥಳಕ್ಕೆ ಬಂದು ದೈವ ಬಂದಿದೆ ಎಂದು ಹೈಡ್ರಾಮಾ ಮಾಡಿದ್ದಾರೆ.

ಸರ್ವೆ ಮಾಡುವಾಗ ಏಕಾಏಕಿ ಕೈಯಲ್ಲಿ ಬೆಂಕಿ ಹಿಡಿದು ಓಡಿ ಬಂದ ಸುರೇಶ್ ತನ್ನ ತಮ್ಮನ ಹೆಂಡತಿ ರಮ್ಯಾ ಮೇಲೆ ಹಲ್ಲೆ ಮಾಡಿದ್ದಾರೆ. ಮಕ್ಕಳೊಂದಿಗೆ ಜಾಗಟೆ ಬಡಿಯುತ್ತ ಸರ್ವೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಸುರೇಶ್ ದೈವ ಬಂದ ರೀತಿ ವರ್ತಿಸಿದ್ದಾರೆ. ಈ ಬಗ್ಗೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾಗಿರುವ ರಮ್ಯಾ ದೂರು ದಾಖಲಿಸಿದ್ದಾರೆ.




