Fri. Nov 7th, 2025

Hyderabad: ಇರುವೆಗಳಿಗೆ ಹೆದರಿ ಮಹಿಳೆ ಆತ್ಮಹತ್ಯೆ, ಪತಿಗೊಂದು ಸಂದೇಶ ಬರೆದಿಟ್ಟಿದ್ದ ಪತ್ನಿ

ಹೈದರಾಬಾದ್:(ನ.07): ಸಾಮಾನ್ಯವಾಗಿ ಹಾವು, ಜಿರಳೆ, ಇಲಿ, ಚೇಳುಗಳನ್ನು ಕಂಡರೆ ಹೆಣ್ಣುಮಕ್ಕಳು ಹೆದರುವುದು ಸಹಜ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಹೋಗುತ್ತಾರೆಂದರೆ ನಂಬಲು ಅಸಾಧ್ಯ. ಮಹಿಳೆಯೊಬ್ಬರು ಇರುವೆಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. 25 ವರ್ಷದ ಮಹಿಳೆಗೆ ಮೊದಲಿನಿಂದಲೂ ಇರುವೆ ಭಯ ಇತ್ತು ಎಂದು ಪೋಷಕರು ತಿಳಿಸಿದ್ದಾರೆ.

ಇದನ್ನೂ ಓದಿ: 🟣ಧರ್ಮಸ್ಥಳ : ಧರ್ಮಸ್ಥಳ ಗ್ರಾಮ ಪಂಚಾಯತ್ ನಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಲಕ್ಷದೀಪೋತ್ಸವದ ಪೂರ್ವ ತಯಾರಿ ಸಭೆ


ಮಹಿಳೆ 2022ರಲ್ಲಿ ವಿವಾಹವಾಗಿದ್ದರು. ಮೂರು ಮಕ್ಕಳಿದ್ದಾರೆ. ಆಕೆ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.ಪೊಲೀಸರು ಹೇಳಿರುವ ಪ್ರಕಾರ, ಆಕೆಗೆ ಬಾಲ್ಯದಿಂದಲೂ ಇರುವೆಗಳ ಭಯ ಇತ್ತು.
ಈ ಹಿಂದೆ ತನ್ನ ಊರು ಮಂಚೇರಿಯಲ್​ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಘಟನೆಯ ದಿನ ತನ್ನ ಮಗಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಹೋಗಿದ್ದಳು. ಮನೆ ಸ್ವಚ್ಛಗೊಳಿಸಿದ ನಂತರ ಕರೆದುಕೊಂಡು ಹೋಗುವುದಾಗಿ ಹೇಳಿದ್ದಳು.
ಬೆಳಗ್ಗೆ ಕೆಲಸಕ್ಕೆ ಹೋಗಿದ್ದ ಪತಿ ಸಂಜೆ ಹಿಂದಿರುಗಿದಾಗ ಬಾಗಿಲು ಒಳಗಡೆಯಿಂದ ಲಾಕ್ ಆಗಿತ್ತು. ಅಕ್ಕಪಕ್ಕದ ಮನೆಯವರ ಸಹಾಯದಿಂದ ಬಾಗಿಲು ಒಡೆದು ನೋಡಿದಾಗ ಅವರ ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿದ್ದರು. ಸ್ಥಳದಲ್ಲಿ ಸಿಕ್ಕಿ ಆತ್ಮಹತ್ಯಾ ಪತ್ರದಲ್ಲಿ ಕ್ಷಮಿಸಿ ನಾನು ಈ ಇರುವೆಗಳೊಂದಿಗೆ ಬದುಕಲು ಸಾಧ್ಯವಿಲ್ಲ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ, ಜಾಗರೂಕರಾಗಿರಿ ಎಂದು ಬರೆದಿದ್ದಳು.


ಆಕೆ ಮನೆಯನ್ನು ಶುಚಿಗೊಳಿಸುವಾಗ ಇರುವೆಗಳನ್ನು ನೋಡಿರಬಹುದು ಮತ್ತು ಭಯದಿಂದ ಈ ತಪ್ಪು ನಿರ್ಧಾರ ತೆಗೆದುಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಅಮೀನ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *