ಕೊಪ್ಪಳ: ಅಣ್ಣ-ತಂಗಿ ಸಂಬಂಧವನ್ನೇ ನಾಚಿಸುವಂತಹ ಘೋರ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ. ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಒಡಹುಟ್ಟಿದ ತಂಗಿಗೆ ಆಮಿಷವೊಡ್ಡಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ, ಮಗುವಾಗುವಂತೆ ಮಾಡಿದ ಅಘಾತಕಾರಿ ಘಟನೆ ಕೊಪ್ಪಳ ತಾಲೂಕಿನ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಅಪ್ರಾಪ್ತ ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಕುಟುಂಬಸ್ಥರು ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಇದನ್ನೂ ಓದಿ: ⭕ಕಾಸರಗೋಡು: ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದ ಸ್ಕೂಟರ್
ವೈದ್ಯಕೀಯ ತಪಾಸಣೆ ವೇಳೆ ಆಕೆ ಗರ್ಭಿಣಿಯಾಗಿರುವುದು ತಿಳಿದುಬಂದಿದ್ದು, ಕೆಲವೇ ಹೊತ್ತಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.ಈ ಅನಿರೀಕ್ಷಿತ ಘಟನೆಯಿಂದ ಆಘಾತಕ್ಕೊಳಗಾದ ವೈದ್ಯರು ಮತ್ತು ಕುಟುಂಬಸ್ಥರು ಬಾಲಕಿಯನ್ನು ವಿಚಾರಿಸಿದಾಗ, ಸ್ವಂತ ಅಣ್ಣನೇ ತನ್ನ ಮೇಲೆ ದೌರ್ಜನ್ಯ ಎಸಗಿರುವುದಾಗಿ ಆಕೆ ನೋವಿನಿಂದ ಹೇಳಿಕೊಂಡಿದ್ದಾಳೆ. ಬಾಲಕಿ ನೀಡಿದ ಹೇಳಿಕೆಯನ್ನು ಆಧರಿಸಿ, ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ಅಣ್ಣನ ವಿರುದ್ಧ ದೂರು ದಾಖಲಿಸಲಾಗಿದೆ.ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿ ಅಣ್ಣನನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಘಟನೆಯು ಇಡೀ ತಾಲೂಕಿನಲ್ಲಿ ತೀವ್ರ ಆಘಾತ ಮತ್ತು ಚರ್ಚೆಗೆ ಕಾರಣವಾಗಿದ್ದು, ಮಾನವೀಯ ಮೌಲ್ಯಗಳ ಕುಸಿತಕ್ಕೆ ಸಾಕ್ಷಿಯಾಗಿದೆ.ಮನೆಯಲ್ಲಿ ಪೋಷಕರು ಯಾರೂ ಇಲ್ಲದ ಸಮಯ ನೋಡಿಕೊಂಡು ಆರೋಪಿ ಅಣ್ಣ, ತನ್ನ ಅಪ್ರಾಪ್ತ ತಂಗಿಯ ಬಳಿ, “ನಾನು ನಿನ್ನನ್ನೇ ಮದುವೆಯಾಗುತ್ತೇನೆ. ನಿನ್ನನ್ನು ಎಂದಿಗೂ ಕೈಬಿಡುವುದಿಲ್ಲ, ಚೆನ್ನಾಗಿ ನೋಡಿಕೊಳ್ಳುತ್ತೇನೆ. ನಿನಗೆ ಯಾರೂ ಏನೂ ಹೇಳದಂತೆ ಕಾವಲಾಗಿರುತ್ತೇನೆ ಎಂದು ತಂಗಿಗೆ ಒಮ್ಮೆ ಪರಿ ಪರಿ ಬೇಡಿಕೊಂಡನಂತೆ. ಇದಕ್ಕೆ ತಂಗಿ ಆಕ್ಷೇಪ ವ್ಯಕ್ತಪಡಿಸಿ, ಸಮಾಜ ಇಂತಹ ಸಂಬಂಧವನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಳಂತೆ ಆಕೆಯ ಮಾತನ್ನು ಕಡೆಗಣಿಸಿದ ಆರೋಪಿ, ಫೆಬ್ರವರಿ ತಿಂಗಳಿನಿಂದ ಮನೆಯಲ್ಲಿ ಯಾರೂ ಇಲ್ಲದ ವೇಳೆ ಪದೇ ಪದೇ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾಗಿ ಸಂತ್ರಸ್ತೆ ತಂಗಿ ಹೇಳಿಕೊಂಡಿದ್ದಾಳೆ.ಈ ವಿಷಯವನ್ನು ಮನೆಯವರಿಗೆ ತಿಳಿಸಿದರೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದನಂತೆ.


ಅಣ್ಣನ ಬೆದರಿಕೆಗೆ ಹೆದರಿದ್ದ ಅಪ್ರಾಪ್ತೆ ಯಾರ ಬಳಿಯೂ ನೋವು ಹೇಳಿಕೊಳ್ಳಲಾಗದೆ ಮೌನಿಯಾಗಿ ಕಾಲದೂಡಿದ್ದಳು. ಅಕ್ಟೋಬರ್ 26 ರಂದು ಮನೆಯಲ್ಲಿ ಕೆಲಸ ಮಾಡುವಾಗ ಸಂತ್ರಸ್ತೆ ಜಾರಿ ಬಿದ್ದಿದ್ದಳು. ಆಕೆಯ ಸೊಂಟಕ್ಕೆ ಪೆಟ್ಟಾಗಿತ್ತು. ಆರೋಪಿಯೇ ಆಕೆಯನ್ನು ಊರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದ. ಅಲ್ಲಿನ ವೈದ್ಯರು, ಬೆನ್ನಿಗೆ ಪೆಟ್ಟಾಗಿರುವುದರಿಂದ ತಕ್ಷಣ ಸ್ಕ್ಯಾನಿಂಗ್ ಮಾಡಿಸುವಂತೆ ವೈದ್ಯರು ನಿರ್ದೇಶಿಸಿದ್ದರು.ಅದರಂತೆ, ಅಕ್ಟೋಬರ್ 30 ರಂದು ಕೊಪ್ಪಳ ಜಿಲ್ಲಾಸ್ಪತ್ರೆಗೆ ಆಕೆಯನ್ನು ಕರೆತಂದಾಗ, ಸ್ಕ್ಯಾನಿಂಗ್ ವೇಳೆ ಆಕೆಯ ಹೊಟ್ಟೆಯಲ್ಲಿ ಮಗು ಇರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಅಲ್ಲಿಯವರೆಗೂ ತಾನು ಗರ್ಭಿಣಿ ಎಂಬ ವಿಷಯವೇ ಅಪ್ರಾಪ್ತೆಗೆ ತಿಳಿದಿರಲಿಲ್ಲ ಎಂದು ಹೇಳಿಕೊಂಡಿದ್ದಾಳೆ. ಅಲ್ಲದೆ ಅಂದು ರಾತ್ರಿಯೇ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಘಟನೆಯ ನಂತರ, ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಕೊಪ್ಪಳ ಮಹಿಳಾ ಠಾಣೆಯಲ್ಲಿ ಆರೋಪಿ ಅಣ್ಣನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.



