Sat. Nov 8th, 2025

ಉಜಿರೆ:(ನ.9) ಕನ್ಯಾಡಿಯ ಸೇವಾಭಾರತಿ ಸಂಸ್ಥೆಯ ವತಿಯಿಂದ ದೀಪಾವಳಿ ಸ್ನೇಹ ಮಿಲನ

ಉಜಿರೆ: ಸೇವಾ ಮನೋಭಾವದ ದೀಪವನ್ನು ಕಳೆದ 21 ವರ್ಷಗಳಿಂದ ನಿರಂತರವಾಗಿ ಬೆಳಗಿಸುತ್ತಾ ಬಂದಿರುವ ಕನ್ಯಾಡಿಯ ಸೇವಾಭಾರತಿ ಸಂಸ್ಥೆ ಇಂದು ಮತ್ತೊಂದು ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ಸೇವಾ ಕಾರ್ಯಗಳಲ್ಲಿ ತಾಲೂಕಿನಲ್ಲಿ ಮುಂಚೂಣಿಯಲ್ಲಿರುವ ಸರಕಾರೇತರ ಸಂಸ್ಥೆಯಾಗಿ ಕನ್ಯಾಡಿಯ ಸೇವಾಭಾರತಿಯು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಾ ಬಂದಿದೆ.

🟣ಬೆಳ್ತಂಗಡಿ: ಮಲೆಂಗಲ್ಲು ಶ್ರೀ ಉಮಾಮಹೇಶ್ವರ ಕ್ಷೇತ್ರದ ಬ್ರಹ್ಮಕಲಶೋತ್ಸವದ ಸಮಿತಿ ಪುನರ್ ರಚನೆ

ಕನ್ಯಾಡಿಯಲ್ಲಿ ಸ್ವಂತ ಜಾಗದಲ್ಲಿ ಕಟ್ಟಡ ಹೊಂದುವ ಕನಸನ್ನು ಸೇವಾಭಾರತಿ ನನಸು ಮಾಡಿಕೊಳ್ಳುವ ದಿನಗಳು ಹತ್ತಿರ ಬರುತ್ತಿವೆ. ಈ ನಿಟ್ಟಿನಲ್ಲಿ ನೂತನ ಕಟ್ಟಡದ ನೆಲಮಹಡಿಗೆ ಪ್ರಸ್ತುತವಿರುವ ಕಾರ್ಯಾಲಯ ಸೇವಾನಿಕೇತನವು ಸ್ಥಳಾಂತರಗೊಂಡು ಇನ್ನಷ್ಟು ಸಮಾಜಮುಖಿಯತ್ತ ದೃಷ್ಟಿ ಹಾಯಿಸಲಿದೆ.

ಸಂಘಕ್ಕೆ 100ನೇ ವರ್ಷದ ಸಂಭ್ರಮಾಚರಣೆಯ ಶುಭಪರ್ವದಲ್ಲಿ ಈ ನೂತನ ಕಟ್ಟಡದಲ್ಲಿ ಕಾರ್ಯಾಲಯವು ಶುಭಾರಂಭಗೊಳ್ಳಲಿದೆ.

ಈ ನಿಟ್ಟಿನಲ್ಲಿ ಸೇವಾ ಕಾರ್ಯಕ್ಕೆ ಇನ್ನಷ್ಟು ವೇಗ ಕೊಡುವ ನಿಮಿತ್ತ ತಾಲೂಕಿನ ಹಿರಿಯ ಕಾರ್ಯಕರ್ತರು, ಸ್ವಯಂಸೇವಕರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರನ್ನು ಸೇರಿಸಿ ದೀಪಾವಳಿ ಸ್ನೇಹ ಮಿಲನವು ನವೆಂಬರ್‌.9 ರಂದು ಉಜಿರೆಯ ಶಾರದಾ ಮಂಟಪದಲ್ಲಿ ಸಂಜೆ 6.30ಕ್ಕೆ ನಡೆಯಲಿದೆ ಎಂದು ಸೇವಾಭಾರತಿ ಸಂಸ್ಥಾಪಕರಾದ ವಿನಾಯಕ್‌ ರಾವ್‌ ರವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *