Sat. Nov 8th, 2025

ಕಲ್ಲಡ್ಕ: ಪ್ರಾಥಮಿಕ ಶಾಲಾ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ತರುಣ್ ಕೃಷ್ಣ ಜಿ ಎಸ್ ನೇರಳಕಟ್ಟೆ ರಾಜ್ಯಮಟ್ಟಕ್ಕೆ ಆಯ್ಕೆ

ಕಲ್ಲಡ್ಕ: ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ಜರಗುವ ರಾಜ್ಯಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಕಬಡ್ಡಿ ಪಂದ್ಯಾಟಕ್ಕೆ ಬಂಟ್ವಾಳ ತಾಲೂಕಿನ ನೇರಳಕಟ್ಟೆಯ ತರುಣ್ ಕೃಷ್ಣ ಜಿ ಎಸ್ ಆಯ್ಕೆಯಾಗಿರುತ್ತಾನೆ.

ಇದನ್ನೂ ಓದಿ; 🔴ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳಿಗೆ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಬಹುಮಾನ

ಇವರು ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿ, ಇತ್ತೀಚೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ , ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆ ಇದರ ಆಶ್ರಯದಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಜರಗಿದ

ಕರ್ನಾಟಕ ಮಿನಿ ಒಲಿಂಪಿಕ್ಸ್ – 2025 ರ ಕಬಡ್ಡಿ ವಿಭಾಗದ ರಾಜ್ಯಮಟ್ಟದ ಸ್ಪರ್ಧೆಯಲ್ಲೂ ದಕ್ಷಿಣ ಕನ್ನಡ ತಂಡದ ನಾಯಕನಾಗಿ ಭಾಗವಹಿಸಿರುತ್ತಾನೆ
.ಇವನು ಬಂಟ್ವಾಳ ತಾಲೂಕಿನ ನಾರ್ಶ ಮೈದಾನ ಪ್ರೌಢಶಾಲಾ ಮುಖ್ಯಶಿಕ್ಷಕರಾದ ಗೋಪಾಲಕೃಷ್ಣ ನೇರಳಕಟ್ಟೆ ಮತ್ತು ಸುರಿಬೈಲು ಪ್ರೌಢಶಾಲಾ ಶಿಕ್ಷಕಿ ಸ್ವಪ್ನ ಇವರ ಪುತ್ರನಾಗಿರುತ್ತಾನೆ.

Leave a Reply

Your email address will not be published. Required fields are marked *