ಮಂಗಳೂರು: ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚೈತನ್ಯವಾದ ‘ವಂದೇ ಮಾತರಮ್’ ಗೀತೆಯ 150ನೇ ವಾರ್ಷಿಕೋತ್ಸವವನ್ನು ರಾಷ್ಟ್ರವ್ಯಾಪಿ ಆಚರಿಸಲು ಕೇಂದ್ರ ಸಚಿವ ಸಂಪುಟ ತೆಗೆದುಕೊಂಡಿರುವ ನಿರ್ಧಾರವನ್ನು ಹಿಂದೂ ಜನಜಾಗೃತಿ ಸಮಿತಿಯು ಸ್ವಾಗತಿಸುತ್ತದೆ.
ವಂದೇ ಮಾತರಮ್ ಕೇವಲ ಗೀತೆಯಲ್ಲ, ಅದು ಬಂಕಿಮಚಂದ್ರ ಚಟ್ಟೋಪಾಧ್ಯಾಯರು ಭಾರತಮಾತೆಯನ್ನು ದೇವತೆಯಾಗಿ ಆರಾಧಿಸಲು ಮತ್ತು ದಾಸ್ಯದಿಂದ ಮುಕ್ತಿ ಪಡೆಯಲು ಭಾರತೀಯರಲ್ಲಿ ದೇಶಭಕ್ತಿಯ ಜ್ವಾಲೆ ಹೊತ್ತಿಸಲು ಬರೆದ ಶಕ್ತಿಯುತ ಘೋಷವಾಗಿದೆ ಎಂದು *ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕರೆ ನೀಡಲಾಯಿತು.

ಇದನ್ನೂ ಓದಿ: ⭕ಪ್ರೀತಿ-ಪ್ರೇಮ ಅಂತ ಗರ್ಭಿಣಿ ಮಾಡಿ ಕೈಕೊಟ್ಟ
ಸಮಿತಿಯ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಗೊಳ್ತಾ ಮಜಲು ಶ್ರೀ ಗಣೇಶ ಮಂದಿರ, ಮತ್ತು ಶ್ರೀ ಶಾರದಾಂಬ ಭಜನಾ ಮಂದಿರ ಶಾರದನಗರ ಸಜಿಪ, ಪುತ್ತೂರಿನ ಬೋಲುವಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಶ್ರೀ ಮಹಾಮ್ಮಾಯಿ ಭಜನಾ ಮಂದಿರ ಪಿಲ್ಯ,ಬೆಳ್ತಂಗಡಿ.ಇಲ್ಲಿ ಈ ಗೀತೆಯ ಮಹತ್ವವನ್ನು ತಿಳಿಸಿ, ಸಾಮೂಹಿಕವಾಗಿ ‘ವಂದೇ ಮಾತರಮ್’ ಗಾಯನವನ್ನು ನಡೆಸಲಾಯಿತು.

ಸ್ವತಂತ್ರ ಸಂಗ್ರಾಮದ ಕಾರ್ಯವನ್ನು ಮಹರ್ಷಿ ಅರಬಿಂದೋರವರು ಇದನ್ನು ಕೇವಲ ರಾಜಕೀಯ ಕಾರ್ಯವಲ್ಲ, ಬದಲಿಗೆ ಜನರ ಆತ್ಮಚೇತನವನ್ನು ಜಾಗೃತಗೊಳಿಸುವ ಆಧ್ಯಾತ್ಮಿಕ ಕ್ರಿಯೆ ಎಂದು ಪರಿಗಣಿಸಿದ್ದರು.
1905ರ ಬಂಗಾಳ ವಿಭಜನೆ ವಿರೋಧ ಚಳುವಳಿಯ ಮುಖ್ಯವಾಹಿನಿಯಾಗಿದ್ದ ಈ ವಂದೇ ಮಾತರಂ ಘೋಷವು, ಬ್ರಿಟಿಷ್ ದಬ್ಬಾಳಿಕೆಯನ್ನು ಎದುರಿಸಲು ಮತ್ತು ಏಕತೆಯನ್ನು ಸಾರಲು ಸಾಧನವಾಗಿತ್ತು. ಕರ್ನಾಟಕದ ಗುಲ್ಬರ್ಗಾ (ಕಲಬುರಗಿ) ಯಲ್ಲಿ ವಂದೇ ಮಾತರಮ್ ಚಳುವಳಿ ನಡೆದಿತ್ತು. ಈ ವಿದ್ಯಾರ್ಥಿ ನೇತೃತ್ವದ ಚಳುವಳಿಯ ಮೂಲಕ ಇದು ನಮ್ಮ ರಾಜ್ಯದ ಸ್ವಾತಂತ್ರ್ಯ ಸಂಗ್ರಾಮಕ್ಕೂ ಅಪಾರ ಕೊಡುಗೆ ನೀಡಿದೆ ಎಂದರು.

ಈ ಕಾರ್ಯಕ್ರಮದ ವೈಶಿಷ್ಟ್ಯವೇನೆಂದರೆ ಸದ್ಯ ಅನೇಕ ಕಡೆಗಳಲ್ಲಿ ವಂದೇ ಮಾತರಮ್ ಗೀತೆಯ ಮೊದಲ 2 ಪದ್ಯಗಳನ್ನು ಮಾತ್ರ ಹಾಡಲಾಗುತ್ತದೆ, ಆದರೆ ಬಂಕಿಮ ಚಂದ್ರ ಚಟರ್ಜಿ ಯವರು ಒಟ್ಟು 6 ಪದ್ಯಗಳಲ್ಲಿ ಗೀತೆಯನ್ನು ಬರೆದು ಭಾರತ ಮಾತೆಯನ್ನು ವರ್ಣಿಸಿದ್ದಾರೆ. ಸಂಪೂರ್ಣ ವಂದೇ ಮಾತರಮ್ ಗಾಯನದಿಂದ ಭಾರತ ಮಾತೆಗೆ ಪೂರ್ಣ ಗೌರವ ಸಲ್ಲುತ್ತದೆ, ಮತ್ತು ಗೀತೆಯನ್ನು ಕೇಳುವವರ ಮನದಲ್ಲೂ ದೇಶಭಕ್ತಿಯು ಹೆಚ್ಚುತ್ತದೆ. ಹಾಗಾಗಿ ಸಮಿತಿಯು ಈ ನಿಮಿತ್ತ ಸಂಪೂರ್ಣ ವಂದೇ ಮಾತರಮ್ ಗೀತೆಯನ್ನು ಹಾಡುವ ಸಂಕಲ್ಪ ಮಾಡಿತ್ತು. ಕಳೆದ 23 ವರ್ಷಗಳಿಂದ ರಾಷ್ಟ್ರ ಮತ್ತು ಧರ್ಮ ರಕ್ಷಣೆಗೆ ಶ್ರಮಿಸುತ್ತಿರುವ ಸಮಿತಿಯು, ಕೇಂದ್ರ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ, ಈ ಕಾರ್ಯಕ್ರಮದ ಮೂಲಕ ದೇಶಾಭಿಮಾನವನ್ನು ಮೂಡಿಸಲು ಪ್ರಯತ್ನಿಸಿತು.

ಈ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ರಾಷ್ಟ್ರಭಕ್ತರು ಉತ್ಸಾಹದಿಂದ ಭಾಗವಹಿಸಿದರು.


