ಆನೇಕಲ್:(ನ. 8): ಮೂವರು ಮಕ್ಕಳ ತಾಯಿಯೊಬ್ಬಳ ಸಲಿಂಗ ಕಾಮದ ಹುಚ್ಚು ಪುಟ್ಟ ಕಂದಮ್ಮನನ್ನೇ ಕೊಲೆ ಮಾಡುವ ಮಟ್ಟಕ್ಕೆ ಹೋಗಿದೆ. ಯುವತಿಯೊಂದಿಗಿನ ಸಲಿಂಗ ಕಾಮಕ್ಕೆ ಅಡ್ಡಿಯಾಗುತ್ತದೆಂದು 5 ತಿಂಗಳ ಕಂದಮ್ಮನನ್ನು ತಾಯಿಯೇ ಕೊಲೆ ಮಾಡಿದ ದಾರುಣ ಘಟನೆ ಕರ್ನಾಟಕ ಗಡಿ ಭಾಗ ಅನೇಕಲ್ ಸಮೀಪ ತಮಿಳುನಾಡಿನ ಕೆಳಮಂಗಲಂ ಸಮೀಪದ ಚಿನ್ನಟ್ಟಿಯಲ್ಲಿ ನಡೆದಿದೆ. ಸದ್ಯ ಆರೋಪಿಗಳಾದ ಭಾರತಿ (26) ಎಂಬ ವಿವಾಹಿತೆ ಹಾಗೂ ಸುಮಿತ್ರಾ (22) ಎಂಬ ಯುವತಿಯನ್ನು ಕೆಳಮಂಗಲಂ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: 🟣ಉಜಿರೆ:(ನ.9) ಕನ್ಯಾಡಿಯ ಸೇವಾಭಾರತಿ ಸಂಸ್ಥೆಯ ವತಿಯಿಂದ ದೀಪಾವಳಿ ಸ್ನೇಹ ಮಿಲನ
ಗಂಡನಿಲ್ಲದಾಗ ಚಕ್ಕಂದ ಆಡ್ತಿದ್ದ ಭಾರತಿ:
ಚಿನ್ನಟ್ಟಿಯ ಸುರೇಶ್ ಮತ್ತು ಭಾರತಿ ಎಂಬುವವರಿಗೆ ಮದುವೆಯಾಗಿ ಐದು ವರ್ಷವಾಗಿದೆ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು, ಒಂದು ಗಂಡು ಮಗುವಿದೆ. ಅದೇ ಏರಿಯಾದ ಯುವತಿ ಸುಮಿತ್ರಾ ಎಂಬಾಕೆಯ ಜೊತೆಗೆ ಭಾರತಿ ಸ್ನೇಹ ಬೆಳೆಸಿದ್ದಳು. ಸ್ನೇಹ ಸಲಿಂಗ ಕಾಮಕ್ಕೆ ತಿರುಗಿತ್ತು. ಪತಿ ಇಲ್ಲದೆ ಇದ್ದಾಗ ಭಾರತಿ ಮನೆಯಲ್ಲಿ ಇಬ್ಬರೂ ಸೇರಿಕೊಳ್ಳುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಭಾರತಿ- ಸುಮಿತ್ರಾ ಸಲಿಂಗ ಕಾಮಿಗಳಾಗಿದ್ದರು.

ಬೆತ್ತಲೆ ವಿಡಿಯೋ ಕಾಲ್, ಖಾಸಗಿ ಫೋಟೊ ಶೇರ್ ಮಾಡಲು ಬೇರೆಯದೇ ಮೊಬೈಲ್!:
ಇಬ್ಬರೂ ಪರಸ್ಪರ ಮಾತನಾಡಿಕೊಳ್ಳುವುದಕ್ಕೆ, ನಗ್ನ ವಿಡಿಯೋ ಕಾಲ್ ಮಾಡಲು ಮತ್ತು ಖಾಸಗಿ ಫೋಟೊಗಳನ್ನು ಹಂಚಿಕೊಳ್ಳುವುದಕ್ಕೆಂದೇ ಬೇರೆಯದೇ ಮೊಬೈಲ್ ಕೂಡ ಇಟ್ಟುಕೊಂಡಿದ್ದರು. ಸ್ನಾನ ಮಾಡುವಾಗ ನಗ್ನವಾಗಿ ವಿಡಿಯೋ ಕಾಲ್ ಮಾಡುವುದು, ಇಬ್ಬರೂ ಕಿಸ್ ಮಾಡುತ್ತಾ ಫೋಟೋ ಕ್ಲಿಕ್ಲಿಸಿಕೊಳ್ಳುತ್ತಿದ್ದರು. ಭಾರತಿ ತನ್ನ ಎದೆ ಮೇಲೆ ‘sumi’ ಎಂದು ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಳು. ಇಬ್ಬರೂ ಪರಸ್ಪರ ಚಾಕುವಿನಿಂದ ಕೈಕೊಯ್ದುಕೊಂಡಿದ್ದರು. ಅಲ್ಲದೆ, ಪೋಟೋಗಳನ್ನು ಹಾಕಿ ರೀಲ್ಸ್ ವಿಡಿಯೋ ಕೂಡ ಮಾಡಿದ್ದರು.
5 ತಿಂಗಳ ಹಿಂದೆ ಗಂಡುಮಗುವಿಗೆ ಜನ್ಮ ನೀಡಿದ್ದ ಭಾರತಿ: ಇದೇ ವಿಚಾರಕ್ಕೆ ಜಗಳ
ಐದು ತಿಂಗಳ ಹಿಂದೆಯಷ್ಟೇ ಭಾರತಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಮಗು ಆದಾಗಿನಿಂದ ಭಾರತಿ ತನ್ನನ್ನು ದೂರು ಮಾಡುತ್ತಿದ್ದಾಳೆ ಎಂದು ಭಾವಿಸಿದ್ದ ಸುಮಿತ್ರಾ ತಗಾದೆ ತೆಗೆದಿದ್ದಳು. ಈ ವಿಚಾರದಲ್ಲಿ ಇಬ್ಬರ ಮಧ್ಯೆ ಪದೇ ಪದೇ ಜಗಳವಾಗಿ ಕಿತ್ತಾಡುತ್ತಿದ್ದರು. ಮಗುವಿನಿಂದಾಗಿಯೇ ಈ ಗಲಾಟೆಯಾಗುತ್ತಿದ್ದು, ಮಗುವನ್ನು ಕೊಲೆ ಮಾಡು ಎಂದು ಭಾರತಿಗೆ ಸುಮಿತ್ರಾ ತಿಳಿಸಿದ್ದಳು. ಅದರಂತೆ, ಭಾರತಿ ತನ್ನ ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು.

ಹಾಲು ಗಂಟಲಲ್ಲಿ ಸಿಕ್ಕಿ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ಕಥೆಕಟ್ಟಿದ್ದ ಭಾರತಿ
ಮಗು ಹಾಲು ಕುಡಿಯುವಾಗ ಗಂಟಲಲ್ಲಿ ಸಿಕ್ಕಿ ನೆತ್ತಿಗೇರಿ ಸಾವನ್ನಪ್ಪಿದೆ ಎಂದು ಭಾರತಿ ಕಥೆಕಟ್ಟಿದ್ದಳು. ನಂತರ ಕುಟುಂಬಸ್ಥರು ಮಗುವಿನ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದರು. ಇದಾದ ನಂತರ ಭಾರತಿ ಮತ್ತು ಸುಮಿತ್ರಾ ಬಳಸುತ್ತಿದ್ದ ಮೊಬೈಲ್ ಆಕೆಯ ಪತಿ ಸುರೇಶ್ಗೆ ಸಿಕ್ಕಿತ್ತು. ಅದರಿಂದಾಗಿ ಇಬ್ಬರ ಸಲಿಂಗ ಕಾಮದ ವಿಷಯ ಮತ್ತು ಮಗುವಿನ ಕೊಲೆ ರಹಸ್ಯ ಬಯಲಾಯಿತು. ಇದರ ಬೆನ್ನಲ್ಲೇ, ಪೋಲಿಸರಿಗೆ ದೂರು ನೀಡುವುದಾಗಿ ಹೇಳಿ ಸುರೇಶ್ ಮನೆಯಿಂದ ತೆರಳಿದ್ದರು. ಈ ವೇಳೆ ಫೋನ್ ಮಾಡಿದ ಭಾರತಿ, ಮಗುವನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಈ ಎಲ್ಲ ಘಟನೆಯ ನಂತರ, ಮೊಬೈಲ್ನಲ್ಲಿ ಸಿಕ್ಕಿದ ಆಡಿಯೋ, ವಿಡಿಯೋ, ಫೋಟೋಗಳ ಸಮೇತವಾಗಿ ಸುರೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಕೆಳಮಂಗಲಂ ಪೊಲೀಸ್ ಠಾಣೆಯಲ್ಲಿ ಭಾರತಿ ಮತ್ತು ಸುಮಿತ್ರಾ ವಿರುದ್ದ ಪ್ರಕರಣ ದಾಖಲಾಗಿದೆ. ಕೆಳಮಂಗಲಂ ತಹಶೀಲ್ದಾರ್ ಗಂಗೈ ರವರ ಸಮ್ಮುಖದಲ್ಲಿ ಮಗುವಿನ ಶವವನ್ನು ಮತ್ತೆ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಭಾರತಿ ಮತ್ತು ಸುಮಿತ್ರಾಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.



