ಕಾಶಿಪಟ್ಣ: ಕಾಶಿಪಟ್ಣ ಸ್ಮಶಾನದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗಳ ಘೋರ ನಿರ್ಲಕ್ಷ್ಯದ ಘಟನೆ ವರದಿಯಾಗಿದೆ. ಮೃತದೇಹವನ್ನು ಸರಿಯಾಗಿ ಸುಡದ ಕಾರಣ ಅರ್ಧ ಸುಟ್ಟ ಭಾಗಗಳನ್ನು ನಾಯಿಯೊಂದು ಸ್ಮಶಾನದಿಂದ ಎಳೆದೊಯ್ದು ಅಕ್ಕಪಕ್ಕದ ಮನೆಗಳ ಬಳಿ ತಂದಿರಿಸಿದ ದುರಂತ ಘಟನೆ ಸಂಭವಿಸಿದೆ.

ಇದನ್ನೂ ಓದಿ: ⭕ಪ್ರೀತಿ-ಪ್ರೇಮ ಅಂತ ಗರ್ಭಿಣಿ ಮಾಡಿ ಕೈಕೊಟ್ಟ
ಪಂಚಾಯತ್ ಸಿಬ್ಬಂದಿಗಳ ಈ ಬೇಜವಾಬ್ದಾರಿತನವು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮೃತರ ಗೌರವಕ್ಕೆ ಚ್ಯುತಿ ತಂದಿರುವ ಹಾಗೂ ನೆರೆಹೊರೆಯವರ ಆರೋಗ್ಯಕ್ಕೆ ಅಪಾಯ ಉಂಟುಮಾಡಿರುವ ಈ ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಪಂಚಾಯತ್ ಗೆ ದೂರು ಕೊಟ್ಟರೂ ಸಿಬ್ಬಂದಿಗಳು ಕ್ಯಾರೇ ಎನ್ನಲಿಲ್ಲ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.





