Sat. Nov 8th, 2025

ಬೆಳ್ತಂಗಡಿ: ಬೆಳ್ತಂಗಡಿ ಎಸ್ ಡಿ ಎ ಆಂಗ್ಲ ಮಾಧ್ಯಮ ಶಾಲೆಗೆ ಪ್ರೌಢಶಾಲಾ ಪ್ರತಿಭಾ ಕಾರಂಜಿಯಲ್ಲಿ ಹಲವು ಪ್ರಶಸ್ತಿಗಳು

ಬೆಳ್ತಂಗಡಿ: (ನ.8) ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆಯಲ್ಲಿ ನಡೆದ ಪ್ರೌಢಶಾಲಾ ಪ್ರತಿಭಾ ಕಾರಂಜಿಯಲ್ಲಿ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.


ಶ್ರೀ ರಕ್ಷಾ 9ನೇ ಜಾನಪದ ಗೀತೆ ಪ್ರಥಮ, ಪ್ರಾಪ್ತಿ ವಿ ಶೆಟ್ಟಿ 9ನೇ ಭರತನಾಟ್ಯ ಪ್ರಥಮ, ಬೃಂದಾ ಎಸ್ 9ನೇ ಚಿತ್ರಕಲೆ ಪ್ರಥಮ, ಯಶ್ವಿತಾ 10ನೇ ಗಝಲ್ ಪ್ರಥಮ, ಜಾನಪದ ನೃತ್ಯ ಪ್ರಥಮ (ಪೂರ್ವಿ ,ತೇಜಸ್ ರಿದು,ಶ್ರೀರಕ್ಷಾ, ಪ್ರಾಪ್ತಿ, ಸಂಜನಾ)
ಕವ್ವಾಲಿ ಪ್ರಥಮ (ಅನಘ ಮರಾಠೆ, ಶ್ರೀ ನಂದನ್, ನಿದೀಶ್, ಸಹನಾ, ರಿಷಿತ ,ಶ್ರೇಯಸ್ )

ಧಾರ್ಮಿಕ ಪಠಣ ಸಂಸ್ಕೃತ ಅನಘ ಮರಾಠೆ 10ನೇ ದ್ವಿತೀಯ, ಧಾರ್ಮಿಕ ಪಠಣ ಅರೇಬಿಕ್ ಅಮನ್ ಶೇಕ್ 10ನೇ ದ್ವಿತೀಯ, ಹಿಂದಿ ಭಾಷಣ ರಿತಿಕಾ 9ನೇ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

ಇವರಿಗೆ ಶಾಲಾ ಶಿಕ್ಷಕಿಯರಾದ ಶ್ರೀಮತಿ ಗೀತಾ, ಶ್ರೀಮತಿ ಕಾರುಣ್ಯ(ಜನಪದ ನೃತ್ಯ), ಶ್ರೀಮತಿ ಮೆನಿತಾ(ಗಝಲ್ ಮತ್ತು ಹಿಂದಿ ಭಾಷಣ), ಶ್ರೀಮತಿ ಸುಮಲತಾ(ಕವ್ವಾಲಿ), ಶ್ರೀಮತಿ ಅಮಿತ(ಗಝಲ್), ಶ್ರೀಮತಿ ರಮ್ಯ (ಜಾನಪದ ಗೀತೆ), ಶ್ರೀಮತಿ ಸಹನ (ಭರತನಾಟ್ಯ) ಶ್ರೀಮತಿ ಸ್ವಾತಿ (ಸಂಸ್ಕೃತ ಪಠಣ)
ಮಂಜುನಾಥ್ (ಅರೇಬಿಕ್ ಪಠಣ) ಜಯರಾಮ್
( ಚಿತ್ರಕಲೆ) ತರಬೇತಿ ನೀಡಿರುತ್ತಾರೆ. ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತ ಪ್ರೋತ್ಸಾಹಿಸಿರುತ್ತಾರೆ.

Leave a Reply

Your email address will not be published. Required fields are marked *