Mon. Nov 10th, 2025

ಲಾಯಿಲ: ಕನ್ನಾಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ನೂತನ ಪದಾಧಿಕಾರಿಗಳ ಆಯ್ಕೆ

ಲಾಯಿಲ: ಲಾಯಿಲ ಗ್ರಾಮ ಕನ್ನಾಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಮುಂದಿನ 2 ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯೂ ಭಜನಾ ಮಂದಿರ ವಠಾರದಲ್ಲಿ ನಡೆಯಿತು.

ಇದನ್ನೂ ಓದಿ: 🔰ಬೆಳ್ತಂಗಡಿ: “ನಿರಾಶ್ರಿತರಲ್ಲಿ ಹೃದಯಗಳ ಬೆಸುಗೆ” — ತೊಡಂಬಿಲ ಸೇಕ್ರೆಡ್ ಹಾರ್ಟ್ ಚರ್ಚ್‌ನಿಂದ ಸಿಯೋನ್ ಆಶ್ರಮಕ್ಕೆ ನೆರವು


ಸಾರ್ವಜನಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಧಾರ್ಮಿಕ ಕ್ಷೇತ್ರದಲ್ಲೂ ಸೇವೆಗೈಯುತ್ತಿರುವ ಇದೀಗ ಲಾಯಿಲ ಗ್ರಾಮದ ಕನ್ನಾಜೆ ಪರಿಸರದಲ್ಲಿ ಸುಮಾರು 32 ವರ್ಷ ಇತಿಹಾಸ ಇರುವ ಶ್ರೀ ದುರ್ಗಾಭಜನಾ ಮಂದಿರ ಇದರ ನೂತನ ಅಧ್ಯಕ್ಷರಾಗಿ ಜಗದೀಶ್ ಕನ್ನಾಜೆ ಯವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.


ಕಾರ್ಯದರ್ಶಿಯಾಗಿ ಚರಣ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಶಾಂಭವಿ,ಕೋಶಾಧಿಕಾರಿಯಾಗಿ ಕಿರಣ್ ಆಚಾರ್ಯ, ಉಪಾಧ್ಯಕ್ಷರಾಗಿ ಪ್ರಶಾಂತ್ ಶೆಟ್ಟಿ ಹಾಗೂ ತಿಲಕ್ ರಾಜ್ ಆಯ್ಕೆಯಾಗಿದ್ದು, ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಗೌರವ ಅಧ್ಯಕ್ಷರಾಗಿ ಗಣೇಶ್ ಕಟೀಲೇಶ್ವರಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಶೆಟ್ಟಿ ಇವರನ್ನು ಮುಂದುವರಿಸುವುದೆಂದು ತೀರ್ಮಾನಿಸಲಾಯಿತು.


ಈ ಹಿಂದಿನ ಅಧ್ಯಕ್ಷರು, ಹಿರಿಯರು ಮಾರ್ಗದರ್ಶಕರು ಪ್ರಥಮವಾಗಿ ಭಜನಾ ಮಂದಿರದ ಸ್ಥಾಪನೆಯಲ್ಲಿ ಓರ್ವರಾದ ಶ್ರೀ ಜಾರಪ್ಪ ಸಪಲ್ಯ ಕನ್ನಾಜೆ ಇವರು ಮಾತಾಡಿ ನನಗೆ ನೀಡಿದ ಸಹಕಾರ ಹೊಸ ಯುವಕರ ತಂಡಕ್ಕೂ ನೀಡಿ ಎಂದು ತಿಳಿಸಿ ಶುಭಹಾರೈಸಿದರು.
ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಪ್ರಾಸ್ತಾವಿಕ ಮಾತಾಡಿ ಭಜನಾ ಮಂದಿರ ಬೆಳಗಿದಂತೆ ಪ್ರತಿ ಒಬ್ಬರ ಮನೆಯು ಬೆಳಗಲಿ.


ನೂತನ ತಂಡದಿಂದ ಇನ್ನಷ್ಟು ಅಭಿವೃದ್ಧಿ ಕೆಲಸ ಆಗಲಿ ನನ್ನ ಸಹಕಾರ ಯಾವತ್ತೂ ನಿಮ್ಮ ಜೊತೆ ಇದೆ ಮತ್ತು ಅಮ್ಮನ ಆಶೀರ್ವಾದ ನಿಮ್ಮ ಜೊತೆ ಇದೆ ಎಂದರು. ನೂತನ ಅಧ್ಯಕ್ಷ ಜಗದೀಶ್ ಕನ್ನಾಜೆ ಮಾತಾಡಿ ಸ್ಥಳ ಸಾನಿಧ್ಯದ ಆಶೀರ್ವಾದ ಮತ್ತು ಹಿರಿಯರೆಲ್ಲರ ಆಶೀರ್ವಾದ ನನಗೆ ಸಿಕ್ಕಿದೆ. ಸ್ಥಳ ಸಾನಿಧ್ಯದ ಶಕ್ತಿ ಏನು ಎಂಬುದನ್ನು ನಾನು ಅನುಭವಿಸಿದ್ದೇನೆ . ಮುಂದಿನ ಎರಡು ವರ್ಷದಲ್ಲಿ ನಾವೆಲ್ಲರೂ ಒಟ್ಟಾಗಿ ಉತ್ತಮ ರೀತಿಯ ಧಾರ್ಮಿಕ ಕಾರ್ಯಕ್ರಮ ಮತ್ತು ಅಭಿವೃದ್ಧಿ ಕೆಲಸಗಳನ್ನು ಮಾಡುವ ಆ ನಿಟ್ಟಿನಲ್ಲಿ ತಮ್ಮೆಲ್ಲರ ಸಹಕಾರ ಕೋರಿದರು.

Leave a Reply

Your email address will not be published. Required fields are marked *