ಬೆಳ್ತಂಗಡಿ: ಸೇಕ್ರೆಡ್ ಹಾರ್ಟ್ ಚರ್ಚ್,ತೊಡಂಬಿಲ, ಚರ್ಚ್ನ ಧರ್ಮಗುರುಗಳಾದ ಅತಿ ವಂದನೀಯ ಅಂತೋನಿ ಲೋಬೊರವರ ಮಾರ್ಗದರ್ಶನದಲ್ಲಿ, ಕಾರ್ಮಿಕ, ಪರಿಸರ ಮತ್ತು

ಇದನ್ನೂ ಓದಿ: 👸🏻ಮಂಗಳೂರಿನ ವಂಶಿ ಮುಡಿಗೇರಿದ ಮಹಾನಟಿ ಕಿರೀಟ
ಅಂತರ್ಧರ್ಮೀಯ ಆಯೋಗಗಳ ಸಂಯುಕ್ತ ಪೋಷಕತ್ವದಲ್ಲಿ, “ನಿರಾಶ್ರಿತರಲ್ಲಿ ಹೃದಯಗಳ ಬೆಸುಗೆ” ಎಂಬ ಪರಿಕಲ್ಪನೆಯಡಿ ಸಿಯೋನ್ ಆಶ್ರಮ ಟ್ರಸ್ಟ್ (ರಿ.), ಗಂಡಿಬಾಗಿಲಿನ ನಿರ್ಗತಿಕರಿಗಾಗಿ ಸುಮಾರು ರೂ. 2 ಲಕ್ಷ ಮೌಲ್ಯದ ನಿತ್ಯೋಪಯೋಗಿ ವಸ್ತುಗಳನ್ನು ಸಂಗ್ರಹಿಸಿ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಡಾ. ಯು.ಸಿ. ಪೌಲೋಸ್ ರವರಿಗೆ ಹಸ್ತಾಂತರಿಸಲಾಯಿತು.
ಈ ಉತ್ತಮ ಸೇವಾ ಚಟುವಟಿಕೆಯನ್ನು ಶ್ಲಾಘಿಸಿದ ಡಾ. ಯು.ಸಿ. ಪೌಲೋಸ್ ರವರು ಮಾತನಾಡಿ, “ನಿರ್ಗತಿಕರಲ್ಲಿ ಹೃದಯಗಳ ಬಾಂಧವ್ಯತೆ ನಿರ್ಮಿಸಲು ಇದು ದಾನಭಾವನೆಯ ಸುಂದರ ನಿದರ್ಶನ” ಎಂದು ಹೇಳಿದರು.



ಈ ಸಂದರ್ಭದಲ್ಲಿ ಚರ್ಚ್ನ ಪಾಲನಾ ಮಂಡಳಿ ಸದಸ್ಯರು, ವಿವಿಧ ಆಯೋಗ ಸದಸ್ಯರು ಹಾಗೂ ಚರ್ಚ್ನ ಭಕ್ತಜನರು ಉಪಸ್ಥಿತರಿದ್ದರು.


