Bigg Boss Kannada : ಕಿರುತೆರೆ ನಟ ಧ್ರುವಂತ್ ಅವರು ಬಿಗ್ ಬಾಸ್ ಮನೆಯಲ್ಲಿ ಕೆಲವರ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ರಾಶಿಕಾ ಬಗ್ಗೆ ಅವರು ಇಲ್ಲಸಲ್ಲದ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: 💐ಉಜಿರೆ: ಜಿಲ್ಲಾ ಮಟ್ಟದ ಗೀತಗಾಯನ ಸ್ಪರ್ಧೆಯಲ್ಲಿ ಅನುಗ್ರಹ ಶಾಲೆಯ ಗೈಡ್ಸ್ ದ್ವಿತೀಯ ಸ್ಥಾನ
ಕಾವ್ಯ ಬಳಿ ಹೋಗಿ ಧ್ರುವಂತ್ ನೀಡಿದ ಹೇಳಿಕೆ ದೊಡ್ಡ ಜಗಳಕ್ಕೆ ಕಾರಣ ಆಗಿದೆ. ಧ್ರುವಂತ್ ವಿರುದ್ಧ ರಾಶಿಕಾ ಶೆಟ್ಟಿ ಮತ್ತು ಕಾವ್ಯ ಶೈವ ಅವರು ತಿರುಗಿ ಬಿದ್ದಿದ್ದಾರೆ. ‘ಹೆಣ್ಮಕ್ಕಳ ಜೊತೆ ಮಾತಾಡೋಕೆ ನನಗೆ ಇಷ್ಟ ಇಲ್ಲ’ ಎಂದು ಧ್ರುವಂತ್ ಹೇಳಿದ್ದಾರೆ.
‘ನಿಮ್ಮ ಜೊತೆ ಮಾತಾಡೋಕೆ ಹೆಣ್ಮಕ್ಕಳಿಗೆ ಇಷ್ಟ ಇಲ್ಲ’ ಎಂದು ಕಾವ್ಯ ಅವರು ತಿರುಗೇಟು ನೀಡಿದ್ದಾರೆ. ನವೆಂಬರ್ 10ರ(ಇಂದು) ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.





