ಉಜಿರೆ: ಯಾವುದೇ ಪ್ರಾಚೀನ ಸಂಸ್ಕೃತ ಕವಿಗಳ ದೇಶ, ಕಾಲ ಹಾಗೂ ಕೃತಿಗಳ ಬಗ್ಗೆ ತಿಳಿಯುವುದೇ ಕಷ್ಟದ ವಿಷಯ . ಆಗ ಅದನ್ನೆಲ್ಲ ಹೇಳಿಕೊಳ್ಳುವ ಕ್ರಮವೇ ಇರಲಿಲ್ಲ ಎಂದು ತಿಳಿಯಬಹುದು.

ಇದನ್ನೂ ಓದಿ: 🔆ಧರ್ಮಸ್ಥಳ: ಧರ್ಮಸ್ಥಳ ಲಕ್ಷ ದೀಪೋತ್ಸವದ ಪ್ರಯುಕ್ತ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ
ಅವರಿಗೆಲ್ಲ ತಮ್ಮ ಗ್ರಂಥಗಳ ಲೋಕಾರ್ಪಣೆ ಮಾತ್ರ ಉದ್ದೇಶವಾಗಿತ್ತು. ಅಂತಹ ಮೇರು ಕವಿಗಳ ಸಾಲಿನಲ್ಲಿ ನಿಲ್ಲುವ ಕವಿಯೇ ಕಾಳಿದಾಸನು ಕೂಡ ಒಬ್ಬ. ಸಂಸ್ಕೃತ ಅಂದರೆ ಕಾಳಿದಾಸ ಎನ್ನುವ ಮಟ್ಟಿಗೆ ಅತ್ಯಂತ ಪ್ರಸಿದ್ಧ ಸಂಸ್ಕೃತ ಕವಿ. ಎರಡು ಮಹಾಕಾವ್ಯ , ಎರಡು ಖಂಡಕಾವ್ಯ ಹಾಗೂ ಮೂರು ನಾಟಕಗಳು ಇವನ ಕೊಡುಗೆಗಳು. ಇವನ ಅಭಿಜ್ಞಾನ ಶಾಕುಂತಲ ನಾಟಕವು ಲೋಕ ಪ್ರಸಿದ್ಧವಾದದ್ದು. ಇವನಿಗೆ ಉಪಮಾ ಕಾಳಿದಾಸ , ಕವಿಕುಲ ಗುರು , ದೀಪಶಿಖಾ ಇತ್ಯಾದಿ ಬಿರುದುಗಳು ಇವನ ಔನ್ನತ್ಯವನ್ನು ತಿಳಿಸುತ್ತವೆ. ಒಟ್ಟಾರೆ ಇವನೊಬ್ಬ ಕವಿಕಲ್ಪವೃಕ್ಷ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಇತಿಹಾಸ ಉಪನ್ಯಾಸಕಿ ಅಭಿಜ್ಞಾ ಉಪಾಧ್ಯಾಯ ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗ ಹಾಗೂ ಸಂಸ್ಕೃತ ಅಂತರಾಧ್ಯನ ವೃತ್ತಮ್ ಇವುಗಳ ವತಿಯಿಂದ ನಡೆದ ಕವಿಕಲ್ಪವೃಕ್ಷ ಕಾಳಿದಾಸ ಎನ್ನುವ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನಕುಮಾರ ಐತಾಳ್ ಉಪಸ್ಥಿತರಿದ್ದರು.
ನಿಜ ಕುಲಾಲ್ ಸ್ವಾಗತಿಸಿ ಪರಿಚಯಿಸಿದರು. ಸಂಸ್ಕೃತ ಸಂಘದ ಅಧ್ಯಕ್ಷೆ ಹಂಸಿನಿ ಭಿಡೆ ಗೌರವಿಸಿದರು. ಲಿಖಿತಾ ಆರ್.ಎಸ್ ನಿರೂಪಿಸಿ , ಧರೇಶ ವಂದಿಸಿದರು.




