ಧರ್ಮಸ್ಥಳ: (ನ.12) ನಾಡಿನ ಪವಿತ್ರಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕಮಾಸದಲ್ಲಿ ಶುಭಲಗ್ನದಲ್ಲಿ ಲಕ್ಷದೀಪೋತ್ಸವ ನ. 15 ರಿಂದ 19ರ ವರೆಗೆ ನಡೆಯಲಿವೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವದ ಪ್ರಯುಕ್ತ ನ.15 ರಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಿಂದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ 13 ನೇ ವರ್ಷದ ಪಾದಯಾತ್ರೆಯು ನಡೆಯಲಿದೆ. ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ಕೃಷ್ಣ ಪಡ್ವೆಟ್ನಾಯರವರು ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ, ಪಾದಯಾತ್ರೆ ಬಗ್ಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಿಜಯಗೋಪುರ ನಿರ್ಮಾಣದ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಶರತ್ ಕೃಷ್ಣ ಪಡ್ವೆಟ್ನಾಯ , ಮೋಹನ್ ಶೆಟ್ಟಿಗಾರ್, ರಾಘವೇಂದ್ರ ಬೈಪಾಡಿತ್ತಾಯ, ಜಯಂತ್ ಶೆಟ್ಟಿ, ಅರುಣ್ ಕುಮಾರ್, ಪ್ರಶಾಂತ್ ಜೈನ್ ಹಾಗೂ ಅಬೂಬಕ್ಕರ್ ಉಪಸ್ಥಿತರಿದ್ದರು.




