Wed. Nov 12th, 2025

Ujire: ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಕಿಡ್ಸ್ ವಿಕ್ಟರಿ ಫಿಯೇಸ್ಟಾ 2025”

ಉಜಿರೆ : ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಕಿಡ್ಸ್ ವಿಕ್ಟರಿ ಫಿಯೇಸ್ಟಾ 2025″ದಿನಾಂಕ 12.11.2025 ರಂದು ನಡೆಯಿತು.

ಇದನ್ನೂ ಓದಿ: 🔶ಉಜಿರೆ: ಉಜಿರೆಯ ಶ್ರೀ ಧ.ಮಂ.ಪ.ಪೂ.ಕಾಲೇಜಿನಲ್ಲಿ “ಕವಿಕಲ್ಪವೃಕ್ಷ ಕಾಳಿದಾಸ” ಅತಿಥಿ ಉಪನ್ಯಾಸ ಕಾರ್ಯಕ್ರಮ

ಈ ಕಾರ್ಯಕ್ರಮದ ಅಧ್ಯಕ್ಷರಾಗಿ ಶಾಲಾ ಸಂಚಾಲಕರಾದ ವಂದನೀಯ ಫಾ.ಅಬೆಲ್ ಲೋಬೋ ,ಮುಖ್ಯ ಅತಿಥಿಗಳಾಗಿ ಶಾಲೆಯ ಹಿರಿಯ ದೈಹಿಕ ಶಿಕ್ಷಕರಾದ ಶ್ರೀಯುತ ವಸಂತ ಹೆಗ್ಡೆ ,ಶಾಲಾ ಪ್ರಾಂಶುಪಾಲರಾದ ವಂದನೀಯ ಫಾದರ್ ವಿಜಯ್ ಲೋಬೋ ಮತ್ತು ಶಿಕ್ಷಕ-ರಕ್ಷಕ ಸಂಘದ ಸದಸ್ಯರು ಭಾಗವಹಿಸಿದರು.

ನರ್ಸರಿಯಿಂದ ನಾಲ್ಕನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕ್ರೀಡಾ ಸಪ್ತಾಹದ ವಿಜೇತರನ್ನು ಈ ದಿನದಂದು ಅಭಿನಂದಿಸಲಾಯಿತು. ಸಹ ಶಿಕ್ಷಕಿಯಾದ ಶ್ರೀಮತಿ ಅರ್ಪಿತಾ ಪಡ್ಡಿಲ್ಲಾಯ ನಿರೂಪಿಸಿ ,ಮೂರನೇ ತರಗತಿಯ ವಿದ್ಯಾರ್ಥಿಗಳು ಸ್ವಾಗತಿಸಿ ,ನಾಲ್ಕನೇ ತರಗತಿ ವಿದ್ಯಾರ್ಥಿಗಳು ವಂದಿಸಿ ,ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Leave a Reply

Your email address will not be published. Required fields are marked *