Thu. Nov 13th, 2025

Belthangadi: ಬಾಗಲಕೋಟೆ ಜಿಲ್ಲೆ ಕರ್ನಾಟಕ ರಾಜ್ಯ ಗ್ರಾಮ ನೌಕರರ ಶ್ರೇಯೋಭಿವೃದ್ಧಿ ಸಂಘ ಆರ್ ಡಿ ಪಿ ಆರ್ ನ ಸಮಾಲೋಚನಾ ಸಭೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಶ್ರೇಯೋಭಿವೃದ್ಧಿ ಸಂಘದಿಂದ ಬಾಗಲಕೋಟೆ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆಯನ್ನು ಬಾಗಲಕೋಟೆ ಗದ್ದಿನಕೇರಿ ಕ್ರಾಸ್ ನ ಶ್ರೀ ಲಡ್ಡು ಮುತ್ಯಾ ಸಭಾಂಗಣದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಡಾ. ದೇವಿ ಪ್ರಸಾದ್ ಬೊಳ್ಮ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಇದನ್ನೂ ಓದಿ: 🛑ಮಂಗಳೂರು: ಮಂಜನಾಡಿ ಸಿ.ಎಸ್.ಸಿ ಕೇಂದ್ರದಲ್ಲಿ DIGIPAY ಕಾರ್ಯಕ್ರಮ ಉದ್ಘಾಟನೆ


ಇತ್ತೀಚೆಗೆ ಗ್ರಾಮ ಪಂಚಾಯತಿ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಗ್ರಾಮ ಪಂಚಾಯತ್ ನೌಕರರಿಗೆ ವೇತನ ಶ್ರೇಣಿ ನಿಗದಿಪಡಿಸ ಬೇಕು, ಸಿ ಮತ್ತು ಡಿ ದರ್ಜೆ ಸ್ಥಾನ ಮಾನ ನೀಡಬೇಕು, ನೌಕರರಿಗೆ ಮತ್ತು ನೌಕರರ ಅವಲಂಬಿತರಿಗೆ ಅರೋಗ್ಯ ಭದ್ರತೆ ಒದಗಿಸ ಬೇಕು, ಸೇವಾ ಭದ್ರತೆ ಜೊತೆಗೆ ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸಬೇಕು, ನಿಗದಿತ ಸಮಯದಲ್ಲಿ ವೇತನ ಪಾವತಿ ಆಗಬೇಕು, ರಾಜ್ಯ ವ್ಯಾಪ್ತಿ ಗ್ರಾಮ ಪಂಚಾಯತಿ ನೌಕರರಿಗೆ ಭವಿಷ್ಯ ನಿದಿ ಹಾಗೂ ಆರೋಗ್ಯ ಭದ್ರತೆಯನ್ನು ಕೂಡಲೇ ಒದಗಿಸಬೇಕು ಎಂದು ಸಭೆಯಲ್ಲಿ ರಾಜ್ಯಾಧ್ಯಕ್ಷರು ಒತ್ತಾಯಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆರ್ ಕುಲಾಲ್ ಮಾತನಾಡಿ ಗ್ರಾಮ ಪಂಚಾಯತಿ ನೌಕರರ ಸಮಸ್ಯೆಗೆ ನೌಕರರೇ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯ ಎಂದು ತಿಳಿಸಿದರು. ವೇತನ ಸಮಸ್ಯೆ ಹಾಗೂ ಅಧಿಕಾರಿಗಳ ಕಿರುಕುಳದಿಂದಾಗಿ ಗ್ರಾಮ ಪಂಚಾಯಿತಿ ನೌಕರರು ಕುಟುಂಬ ನಿರ್ವಹಣೆಯನ್ನು ಸಾಧ್ಯವಾಗದೆ ಒತ್ತಡದಿಂದ ಪ್ರಾಣವನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ನೌಕರರು ಒಗ್ಗಟ್ಟಾಗಿ ಎದುರಿಸಬೇಕು ಎಂದು ತಿಳಿಸಿದರು.

ಸಂಘದಿಂದ ಈಗಾಗಲೇ ತಮ್ಮ ನ್ಯಾಯಯುತ ಹಕ್ಕಗಳನ್ನು ಪಡೆಯುವ ಬಗ್ಗೆ ರಾಜ್ಯದ ಎಲ್ಲಾ ಹಂತದ ನೌಕರರು ಒಟ್ಟಾಗ ಬೇಕು ಎಂದು ಸಲಹೆ ನೀಡಿದರು. ಬಾಗಲಕೋಟೆ ಜಿಲ್ಲೆಯಲ್ಲಿ ನೌಕರರ ಅನೇಕ ಸಮಸ್ಯೆಗಳಿದ್ದು ನೌಕರರ ಕುಂದುಕೊರತೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಸಂಘಟನೆಯನ್ನು ರಚಿಸಲಾಯಿತು. ಶ್ರೇಯೋಭಿವೃದ್ಧಿ ಸಂಘದ ಧ್ಯೇಯೋದ್ದೇಶವನ್ನು ಒಪ್ಪಿ ಸಂಪೂರ್ಣ ಬೆಂಬಲ ಘೋಷಣೆ ಮಾಡಲಾಯಿತು. ಬಾಗಲಕೋಟೆ ಜಿಲ್ಲಾಧ್ಯಕ್ಷರಾಗಿ ಶ್ರೀ ಪ್ರದೀಪ್ ಎಸ್ ಗಾಣಿಗೇರಾ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಲಕ್ಷ್ಮಣ ಬಿ ದಾಸರ್, ಜಿಲ್ಲಾ ಉಪಾಧ್ಯಕ್ಷರಾಗಿ, ಶ್ರೀ ಶಿವಾನಂದ ಬನ್ನಿ , ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀ ಬಲರಾಮ ಡಿ ಲಮಾಣಿ ಬೀಳಗಿ, ಸದಸ್ಯರುಗಳಾಗಿ ಶ್ರೀ ಡಿ ಎಂ ಮದಕವಿ ಬಾಗಲಕೋಟೆ, ಶ್ರೀ ನಿಂಗಪ್ಪ ಜಾಲಿಕಟ್ಟಿ, ಶ್ರೀ ಸುರೇಶ್ ಕುರಿ, ಶ್ರೀ ಮುತ್ತು ಕಠಣಿ , ಶ್ರೀ ಶಿವಪ್ಪ ಜಾಣಮಟ್ಟಿ, ಶ್ರೀ ಪ್ರಕಾಶ್ ಛಬ್ಬಿ,, ಇವರನ್ನು ಜಿಲ್ಲಾ ಸಮಿತಿಗೆ ಆಯ್ಕೆ ಮಾಡಲಾಯಿತು.

ಹಾವೇರಿ ಜಿಲ್ಲಾಧ್ಯಕ್ಷರಾದ ಶ್ರೀ ವಿಜಯಕುಮಾರ್ ಮಿಲ್ಲಿ ಮಾತನಾಡಿ ನೌಕರರ ಒಗ್ಗಟ್ಟಿನ ಮೂಲಕ ನಮ್ಮ ಸಮಸ್ಯೆಯನ್ನು ನಾವೇ ಬಗೆಹರಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ಹಾವೇರಿ ಜಿಲ್ಲೆಯಲ್ಲಿ ಸಂಘದ ಕಾರ್ಯವೈಖರಿಗಳ ಬಗ್ಗೆ ಸಭೆಗೆ ತಿಳಿಸಿದರು, ವಿಜಯಪುರ ಜಿಲ್ಲಾಧ್ಯಕ್ಷರಾದ ಶ್ರೀ ರಾಮಗೊಂಡ ನಡುವಿನಮಣಿ ಮಾತನಾಡಿ ನೌಕರರ ಒಗ್ಗಟ್ಟಿನ ಮೂಲಕ ಮೂಲ ಬೇಡಿಕೆ ನೀಡಿಸಲು ಸಾಧ್ಯ ವಿಜಾಪುರ ಜಿಲ್ಲೆಯಲ್ಲಿ ಸಂಘದ ಕಾರ್ಯಕ್ರಮಗಳನ್ನು ಸಭೆಗೆ ತಿಳಿಸಿದರು , ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಮಲ್ಲಪ್ಪ ಶಿವಲಿಂಗಪ್ಪ ಮಂಚಿನಕೊಪ್ಪ, ಪದಾಧಿಕಾರಿಗಳಾದ ಶ್ರೀ ಕಾಡಪ್ಪ ಜಾದವ್, ಶ್ರೀ ನಾಗಪ್ಪ ಹನುಮಂತಪ್ಪ ಇಂಧೂರ್, ಧಾರವಾಡ ಜಿಲ್ಲೆಯ ಪದಾಧಿಕಾರಿ, ಹಾಗೂ ಬಾಗಲಕೋಟೆ, ಬೀಳಗಿ, ಹುನಗುಂದ, ಗುಳೇದಗುಡ್ಡ, ಮುಧೋಳ, ಜಮಖಂಡಿ, ರವಿಕಬಾ ಬನಹಟ್ಟಿ, ಬಾದಾಮಿ, ಇಲಕಲ್ ತಾಲೂಕಿನ ಜಿಲ್ಲೆಯ ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ವಾಟರ್ ಮ್ಯಾನ್, ಪಂಪು ಆಪರೇಟರ್, ಸ್ವಚ್ಚತೆಗಾರರು, ಅಟೆಂಡರ್ ನೌಕರರು ಹಾಜರಾಗಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *