ಮಂಗಳೂರು: ಮಂಗಳೂರು ತಾಲೂಕಿನ ದೇರಳಕಟ್ಟೆ ವಲಯ ವ್ಯಾಪ್ತಿಯ ಮಂಜನಾಡಿ ಸಿ.ಎಸ್.ಸಿ ಕೇಂದ್ರದಲ್ಲಿ DIGIPAY ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ವಲಯದಲ್ಲಿ ಅನುಷ್ಠಾನ ಮಾಡಲಾಯಿತು.

ಇದನ್ನೂ ಓದಿ: ⭕Uppinangady: 10 ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ
ಬಿಜೆಪಿಯ ಮಂಗಳೂರು ಮಂಡಲದ ಕಾರ್ಯದರ್ಶಿ ರಮೇಶ್ ಬೆದ್ರೋಳಿಕೆ, ಚಂದ್ರಶೇಖರ ಶೆಟ್ಟಿ ಪ್ರಗತಿಪರ ಕೃಷಿಕರು, ಸುರೇಂದ್ರ ಕುಲಾಲ್, ಶೀನ ಕುಲಾಲ್ ಒಕ್ಕೂಟ ಅಧ್ಯಕ್ಷರು, ತಾಲೂಕು ನೋಡಲ್ ಅಧಿಕಾರಿ, ದೇರಳಕಟ್ಟೆ ವಲಯದ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ಸಂಘದ ಸದಸ್ಯರು, ಸೇವಾದಾರರು, ನಾಗರಿಕರು ಉಪಸ್ಥಿತರಿದ್ದರು.
ಮಾನ್ಯ ಯೋಜನಾಧಿಕಾರಿ ಯವರು ಪೂಜ್ಯ ಖಾವಂದರು ಗ್ರಾಮಮಟ್ಟದ್ದಲ್ಲಿ ಎಲ್ಲಾ ಸದಸ್ಯರಿಗೆ ಬ್ಯಾಂಕಿನ ಸೇವೆಯ ಸೌಲಭ್ಯ ಸಿಗುವಂತೆ ನಮ್ಮ ಗ್ರಾಮಾಭಿವೃದ್ಧಿ ಸಿ.ಎಸ್.ಸಿ ಕೇಂದ್ರದಲ್ಲಿ Digi-pay ಕಾರ್ಯಕ್ರಮವನ್ನು ಅನುಷ್ಠಾನ ಮಾಡಿದ್ದೂ ಎಲ್ಲ ಸದಸ್ಯರು ಪ್ರಯೋಜನ ಪಡೆದು ಕೊಳ್ಳುವಂತೆ ತಿಳಿಸಿದರು ಹಾಗೂ ಸಿ.ಎಸ್.ಸಿ ಕಾರ್ಯಕ್ರಮಗಳ ಮಹತ್ವದ ಬಗ್ಗೆ ಮಾಹಿತಿ ನೀಡಲಾಯಿತು.



ನಂತರ ಸೇವಾದಾರರಿಗೆ Matm divece ಹಸ್ತಾಂತರಿಸಲಾಯಿತು. MATM ಮೂಲಕ ಹಣ ಡ್ರಾ ಮಾಡಿ ಸದಸ್ಯರಿಗೆ ಹಣ ನೀಡಲಾಯಿತು. ಈ ಮೂಲಕ ದೇರಳಕಟ್ಟೆ ಕಾರ್ಯಕ್ಷೇತ್ರದಲ್ಲಿ Digi-pay ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲಾಯಿತು.


