ಬೆಳ್ತಂಗಡಿ: ರೊ. ಪ್ರೊ ಪ್ರಕಾಶ ಪ್ರಭು ಅಧ್ಯಕ್ಷ ರಾಗಿರುವ ಬೆಳ್ತಂಗಡಿ ರೋಟರಿ ಕ್ಲಬ್ ಮುಂದಾಳತ್ವದಲ್ಲಿ, ಕ್ಯಾನ್ ಫಿನ್ ಹೋಮ್ ಲಿಮಿಟೆಡ್ ಹಾಗೂ ಬೆಂಗಳೂರು ರೋಟರಿ ಕ್ಲಬ್ ಇಂದಿರಾ ನಗರ ಇವರ ಸಹಕಾರದಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಿಲ್ಲೂರು ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಯಲು ಇಲ್ಲಿ ತಲಾ 12 ಲಕ್ಷ ಮೌಲ್ಯದ ಅತ್ಯಾಧುನಿಕ ಶೌಚಾಲಯ ಮತ್ತು ಪ್ರಭಾಕರ ಭಟ್ ಕಲ್ಲಡ್ಕ ಇವರು ನಡೆಸುತ್ತಿರುವ ಮುಂಡಾಜೆ ಅನುದಾನಿತ ಕನ್ನಡ ಮಾಧ್ಯಮ ಹೈಸ್ಕೂಲಿಗೆ 33 ಕಂಪ್ಯೂಟರ್ ಸಹಿತ ಸುಮಾರು 16.5 ಲಕ್ಷ ಮೌಲ್ಯದ ಕಂಪ್ಯೂಟರ್ ಲ್ಯಾಬನ್ನು ಹಸ್ತಾಂತರ ಮಾಡಲಾಯಿತು.

ಕ್ಯಾನ್ ಫಿನ್ ಹೋಮ್ಸನ ಡಿಜಿಎಮ್ ಶ್ರೀ ಪ್ರಶಾಂತ ಜೋಷಿಯವರು ಮೊದಲ ಎರಡು ಕಾಮಗಾರಿಗಳ ಉದ್ಘಾಟನೆಯನ್ನು ನೆರವೇರಿಸಿದರು. ಕಂಪ್ಯೂಟರ್ ಲ್ಯಾಬ್ ಉದ್ಛಾಟನ ಕಾರ್ಯಕ್ರಮವನ್ನು ಪ್ರಭಾಕರ ಭಟ್ ಕಲ್ಲಡ್ಕ ರವರು ದೀಪ ಬೆಳಗಿಸಿ ಉದ್ಛಾಟನೆ ಮಾಡಿದರು. ಪ್ರಶಾಂತ ಜೋಷಿಯವರು AI ನಂತಹ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿದ ಕಂಪ್ಯೂಟರ್ ಗಳನ್ನು ಹಳ್ಳಿ ಶಾಲೆಗಳಿಗೆ ಒದಗಿಸುವುದರಿಂದ ಅವರು ಪೇಟೆ ಶಾಲೆಯ ಮಕ್ಕಳನ್ನೂ ಮೀರುವಂತ ಸಾಧನೆ ಮಾಡಲು ಶಕ್ತರು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ಡಾ. ಎ ಜಯಕುಮಾರ್ ಶೆಟ್ಟಿ, ರೋಟರಿ ಕ್ಲಬ್ ಟ್ರಸ್ಟ ಅಧ್ಯಕ್ಷ ರೊ. ಶ್ರೀಕಾಂತ ಕಾಮತ್, ಕಾರ್ಯದರ್ಶಿ ಡಾ.ಎಮ್ ಎಮ್ ದಯಾಕರ್, ಸ್ಕಾಲರ್ ಶಿಪ್ ಮತ್ತು ಪ್ರಾಜೆಕ್ಟ ಚೆಯರ್ ಮ್ಯಾನ್ ರೊ.ಅಬುಬಕ್ಕರ್ ಯು. ಎಚ್, ಮಾಜಿ ಅಧ್ಯಕ್ಷರುಗಳಾದ ರೊ. ಪೂರಣ್ ವರ್ಮ, ಮೇಜರ್ ಜನರಲ್ ಎಂ ವಿ ಭಟ್, ಅನಂತ್ ಭಟ್ ಮಚ್ಚಿಮಲೆ, ಸದಸ್ಯರುಗಳಾದ ಸಂದೇಶ ರಾವ್, ಶ್ರೀಧರ್ ಕೆ ವಿ, ವಿದ್ಯಾಕುಮಾರ್, ಧನಂಜಯ್ ರಾವ್,ಡಾ ಶಶಿಧರ ಡೋಂಗ್ರೆ, ಶ್ರವಣ ಕಾಂತಾಜೆ, ಡಾ. ರಾಘವೇಂದ್ರ ಪಿದಮಲೆ ಭಾಗವಹಿಸಿದರು.




