ಬೆಳ್ತಂಗಡಿ: ವಸತಿ ಶಾಲೆ ಮುಗುಳಿಯಲ್ಲಿ ನಡೆದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.

ಇವರಿಗೆ ಕಾರ್ತಿಕ್ ಪ್ರಸಾದ್ 6ನೇ ಆಶುಭಾಷಣ ಪ್ರಥಮ, ದಿಶಾ ಡಿಎ 6ನೇ ಕ್ಲೇ ಮಾಡಲಿಂಗ್ ಪ್ರಥಮ , ಅಹನ್ ಜೈನ್ 4ನೇ ಕ್ಲೇ ಮಾಡಲಿಂಗ್ ಪ್ರಥಮ , ಯಶ್ವಿತ್ 3ನೇ ಚಿತ್ರಕಲೆ ಪ್ರಥಮ, ಅನಘ ಎ ಜಿ 6ನೇ ಅಭಿನಯ ಗೀತೆ ಪ್ರಥಮ, ಅಭಿಜ್ಞಾ 6ನೇ ಇಂಗ್ಲಿಷ್ ಕಂಠಪಾಠ ಪ್ರಥಮ , ನಿಯತಿ ಭಟ್ 2ನೇ ಸಂಸ್ಕೃತ ಪಠಣ ದ್ವಿತೀಯ,
ಅಹನ್ ಜೈನ್ 4 ನೇ ದೇಶಭಕ್ತಿ ಗೀತೆ ದ್ವಿತೀಯ, ದಿಶಾನ್ 6ನೇ ಮಿಮಿಕ್ರಿ ದ್ವಿತೀಯ, ಹರ್ಷಿಕ 4ನೇ ಕಥೆ ಹೇಳುವುದು ದ್ವಿತೀಯ, ಐಶಾಲಿ ಪಿ ಎಸ್ 4ನೇ ಛದ್ಮವೇಶ ತೃತೀಯ, ದೈವಿಕ್ ರೈ 4ನೇ ಇಂಗ್ಲಿಷ್ ಕಂಠಪಾಠ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.


ಇವರಿಗೆ ಪ್ರಮೀಳಾ ಪೂಜಾರಿ, ಜಯರಾಮ್, ಜೆಸಿಂತಾ ರೋಡ್ರಿಗಸ್, ರಮ್ಯಾ, ಸ್ವಾತಿ,ನಯನ, ಸೌಮ್ಯ ಪಿ, ಜಯಲಕ್ಷ್ಮಿ, ನೀತಾ, ಪವಿತ್ರ ತರಬೇತಿಯನ್ನು ನೀಡಿರುತ್ತಾರೆ.
ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಹೇಮಲತಾ ಎಂ ಆರ್ ಪ್ರೋತ್ಸಾಹಿಸಿರುತ್ತಾರೆ.



